ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಗಾಳಿ, ನೀರು ಸೇರಿದಂತೆ ಪ್ರಕೃತಿಗೆ ಮಾರಕವಾಗುತ್ತಿರುವ ಪ್ಲಾಸ್ಟಿಕ್ ಇದೀಗ ಮನುಷ್ಯನ ರಕ್ತದ ಜೊತೆ ಮೆದುಳು ಕೂಡ ಪ್ರವೇಶಿಸುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಜಾಗತಿಕ ಮಟ್ಟದಲ್ಲಿ ತುರ್ತು ಪರಿಸ್ಥಿತಿಗೆ ಕರೆ ನೀಡಿದ್ದಾರೆ.
ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, ಸಂಶೋಧಕರು ಮೈಕ್ರೊಪ್ಲಾಸ್ಟಿಕ್ ಮನಷ್ಯರ ಅಂಗಾಂಗಳಲ್ಲಿ ಪತ್ತೆಯಾಗುತ್ತಿವೆ. ಇದು ಅತಿಯಾದ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮವಾಗಿದ್ದು, ಇದು ಮಾನವ ಸಂಕುಲನಕ್ಕೆ ದೊಡ್ಡ ಅಪಾಯ ಎಂದು ಎಚ್ಚರಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಲು ಸರಕಾರಗಳು ಕ್ರಮ ಕೈಗೊಳಲೇಬೇಕಾದ ತುರ್ತು ಪರಿಸ್ಥಿತಿ ಉಂಟಾಗಿದೆ. ಇದನ್ನು ಹೀಗೆ ಬಿಟ್ಟರೆ ಭಾರೀ ಪ್ರಮಾಣದಲ್ಲಿ ಜೀವಹಾನಿಯ ಅಪಾಯ ಎದುರಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಟರ್ಕಿಯ ಕುಕುರೊವಾ ವಿಶ್ವವಿದ್ಯಾಲಯದ ಸಂಶೋಧನಾ ಪ್ರೊಫೆಸರ್ ಮೈಕ್ರೊ ಪ್ಲಾಸ್ಟಿಕ್ ಪರಿಣಾಮಗಳ ಕುರಿತು ಸಂಶೋಧನೆ ನಡೆಸುತ್ತಿದ್ದು, ಅವರು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಜಾಗತಿಕ ಮಟ್ಟದ ತುರ್ತು ಪರಿಸ್ಥಿತಿ ಕರೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
5 ಮಿ.ಮೀ.ಗಿಂತ ಕಿರಿದಾದ ಪ್ಲಾಸ್ಟಿಕ್ ಗಳು ಮನುಷ್ಯರ ಅಂಗಾಂಗಳಲ್ಲಿ ಪತ್ತೆಯಾಗುತ್ತಿದೆ. ಇತ್ತೀಚೆಗೆ ಮೆದುಳಿನಲ್ಲೂ ಕಂಡು ಬರುತ್ತಿದೆ. ಇದರಿಂದ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗಲಿದೆ. ಕೆಲವು ಸಂದರ್ಭಗಳಲ್ಲಿ ರಕ್ತದಲ್ಲೂ ಪ್ಲಾಸ್ಟಿಕ್ ಅಂಶಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದರು.