ಭಾರತದ ಡಬಲ್ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಡೈಮಂಡ್ ಲೀಗ್ ನಲ್ಲಿ 2ನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.
ಗುರುವಾರ ನಡೆದ ಫೈನಲ್ ನಲ್ಲಿ ನೀರಜ್ ಚೋಪ್ರಾ 6ನೇ ಹಾಗೂ ಅಂತಿಮ ಪ್ರಯತ್ನದಲ್ಲಿ 89.49 ಮೀ. ದೂರ ಎಸೆದು ಎರಡನೇ ಸ್ಥಾನ ಗಳಿಸಿದರು.
ಇದು ನೀರಜ್ ಚೋಪ್ರಾ ಅವರ ಋತುವಿನ ಎರಡನೇ ಶ್ರೇಷ್ಠವಾಗಿತ್ತು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ 89.45 ಮೀ. ಎಸೆದು ಬೆಳ್ಳಿ ಪದಕ ಗೆದ್ದಿದ್ದರು.
2022ರ ಸ್ಟಾಕ್ ಹೋಮ್ ಡೈಮಂಡ್ ಲೀಗ್ ನಲ್ಲಿ ನೀರಜ್ ಚೋಪ್ರಾ 89.97ಮೀ. ಎಸೆದಿರುವುದು ಇದುವರೆಗಿನ ಶ್ರೇಷ್ಠ ದಾಳಿಯಾಗಿದೆ.
ನೀರಜ್ ಚೋಪ್ರಾ 82.10 ಮೀ., 83.21 ಮೀ., 83.13 ಮೀ, 82.34 ಮೀ. ಮತ್ತು 85.58 ಮೀ. ಮೊದಲ 5 ಪ್ರಯತ್ನದಲ್ಲಿ ಎಸೆದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನೀರಜ್ 5 ಬಾರಿ ವಿಫಲರಾಗಿದ್ದರು.
ಗ್ರೆನೆಡಾದ ಆಂಡರ್ಸನ್ ಪೀಟರ್ಸನ್ 90.61 ಮೀ. ಎಸೆದು ಮೊದಲ ಸ್ಥಾನ ಗಳಿಸಿದರೆ, ಜರ್ಮನಿಯ ಜೂಲಿಯನ್ ವೆಬ್ಬರ್ 87.08ಮೀ. ನೊಂದಿಗೆ ಮೂರನೇ ಸ್ಥಾನ ಗಳಿಸಿದರು.