Monday, November 25, 2024
Home ತಾಜಾ ಸುದ್ದಿ ಯುನಿಫೈಡ್ ವಿಮಾ ಯೋಜನೆಯಿಂದ ಕೇಂದ್ರಕ್ಕೆ ವಾರ್ಷಿಕ 6,250 ಕೋಟಿ ಹೊರೆ!

ಯುನಿಫೈಡ್ ವಿಮಾ ಯೋಜನೆಯಿಂದ ಕೇಂದ್ರಕ್ಕೆ ವಾರ್ಷಿಕ 6,250 ಕೋಟಿ ಹೊರೆ!

by Editor
0 comments
ups

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಹೊಸದಾಗಿ ಘೋಷಿಸಿದ ಯುನಿಫೈಡ್ ವಿಮಾ ಯೋಜನೆಯಿಂದ ವಾರ್ಷಿಕ 6250 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ.

23 ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿರುವ ಯುನಿಫೈಡ್ ವಿಮಾ ಯೋಜನೆ ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಯುಐಎಸ್ ಅಥವಾ ಎನ್ ಪಿಎಸ್ ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಯುನಿಫೈಡ್ ವಿಮಾ ಯೋಜನೆಯ ಪ್ರಕಾರ ವಿಮಾ ಯೋಜನೆಯಲ್ಲಿ ಸರ್ಕಾರದ ಪಾಲು ಶೇ.14ರಿಂದ ಶೇ.18.5ಕ್ಕೆ ಏರಿಕೆಯಾಗಲಿದೆ. ಆದರೆ ಸರ್ಕಾರಿ ನೌಕರರ ಪಾಲು ಮೊದಲಿನಂತೆ ಶೇ.10ರಷ್ಟು ಉಳಿಯಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ.

2025, ಮಾರ್ಚ್ 31ರೊಳಗೆ ನಿವೃತ್ತಿ ಆಗಲಿರುವ ಸರ್ಕಾರಿ ನೌಕರರು ಯುನಿಫೈಡ್ ವಿಮಾ ಯೋಜನೆ ಒಪ್ಪಿಕೊಂಡರೆ ಅವರಿಗೆ ಹೆಚ್ಚುವರಿಯಾಗಿ 800 ಕೋಟಿ ರೂ. ಹೊರೆ ಸರ್ಕಾರದ ಮೇಲೆ ಬೀಳಲಿದೆ.

banner

ಕನಿಷ್ಠ 10 ವರ್ಷದಿಂದ ಉದ್ಯೋಗದಲ್ಲಿರುವ ನೌಕರರಿಗೆ ಈ ಯೋಜನೆ ಅನ್ವಯ ಆಗಲಿದ್ದು, ಸೇವಾವಧಿಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ಕನಿಷ್ಠ 10,000 ರೂ. ಕಡಿತವಾಗಲಿದೆ. ಅಲ್ಲದೇ ನಿವೃತ್ತಿ ಆಗುವ ಕೊನೆಯ ವರ್ಷ ಶೇ.10ರಷ್ಟು ವೇತನದಲ್ಲಿ ಕಡಿತವಾಗಲಿದೆ. ನೌಕರರಿಂದ ಕಡಿತಗೊಂಡ ಮೊತ್ತದಷ್ಟೇ ಕೇಂದ್ರ ಸರ್ಕಾರ ತನ್ನ ಪಾಲನ್ನು ನೀಡಲಿದೆ.

ಮುಂಬರುವ ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿಮಾ ಯೋಜನೆ ಘೋಷಿಸಲಾಗಿದೆ. ಅಲ್ಲದೇ ಇದರ ಬೆನ್ನಲ್ಲೇ ಮಹಾರಾಷ್ಟ್ರ ಸೇರಿದಂತೆ ಇನ್ನೆರಡು ರಾಜ್ಯಗಳ ವಿಧಾನಸಭಾ ಚುನಾವಣೆ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ಹೊಸ ವಿಮಾ ಯೋಜನೆಯನ್ನು ಸರ್ಕಾರ ಘೋಷಿಸಿದೆ ಎಂದು ಹೇಳಲಾಗುತ್ತಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news
RCB ಖರೀದಿಸಿದ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ! 10.75 ಕೋಟಿಗೆ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಸೆಳೆದ ಆರ್ ಸಿಬಿ! 2 ಕೋಟಿಗೆ ಡೆಲ್ಲಿ ಪಾಲಾದ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್! 5.75 ಕೋಟಿಗೆ ಕೃನಾಲ್ ಖರೀದಿ! 150 ಕೋಟಿ ಖರ್ಚು ಮಾಡಿದರೂ ನಿಖಿಲ್ ಗೆ ಸೋಲು: ಸಿಎಂ ಇಬ್ರಾಹಿಂ ವ್ಯಂಗ್ಯ World News ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜಾಬುಲ್ಲಾ! ಬೋವಿ ನಿಗಮದ ಅಕ್ರಮ ತನಿಖೆ ವೇಳೆ ಬೆತ್ತಲೆಗೊಳಿಸಿ 25 ಲಕ್ಷಕ್ಕೆ ಬೇಡಿಕೆ: ಮಹಿಳೆ ಆತ್ಮಹತ್ಯೆ ಪ್ರಕರಣ ಸಿಸಿಬಿಗೆ! ಯುಪಿಯ ಸಂಭಾಲ್ ನಲ್ಲಿ ಹಿಂಸಾಚಾರ: ಸಮಾಜವಾದಿ ಸಂಸದ ಸೇರಿ 400 ಮಂದಿ ವಿರುದ್ಧ ಚಾರ್ಜ್ ಶೀಟ್ ! ರಾಹುಲ್ ಗಾಂಧಿ ರೀತಿ ಪರಮೇಶ್ವರ್ ಮಾತಾಡಿದರೆ ಹೇಗೆ?: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಛಾಟಿ ಕಾಂಗರೂ ನೆಲದಲ್ಲಿ ಭಾರತ ಐತಿಹಾಸಿಕ ಗೆಲುವು: ಆಸೀಸ್ ಗೆ 295 ರನ್ ಸೋಲು! ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ: 3 ಸಾವಿರ ವ್ಯಾಪಾರಿಗಳಿಗೆ ಶುಲ್ಕ ವಿನಾಯಿತಿ!