ತನ್ನ ಬರ್ತಡೆಗೆಂದು ಆನ್ ಲೈನ್ ನಲ್ಲಿ ತರಿಸಿದ್ದ ಕೇಕ್ ತಿಂದ ನಂತರ 10 ವರ್ಷದ ಬಾಲಕಿ ಮೃತಪಟ್ಟ ಆಘಾತಕಾರಿ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.
ಬರ್ತಡೆ ಕೇಕ್ ತಿಂದ ನಂತರ ಅಕ್ಕ ಮತ್ತು ತಂಗಿ ಅಸ್ವಸ್ಥರಾಗಿದ್ದು, ಮಾನ್ವಿ ಎಂಬ ಯುವತಿ ಮೃತಪಟ್ಟಿದ್ದಾರೆ.
ಮಗಳ ಸಾವಿಗೆ ಬರ್ತಡೆಗೆ ತರಿಸಿದ್ದ ಕೇಕ್ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಸೋದರಿಯರು ಕೇಕ್ ತಿಂದ ಕೂಡಲೇ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಕ್ಕ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ 3 ಗಂಟೆಗೆ ಮೃತಪಟ್ಟಿದ್ದಾಳೆ. ತಂಗಿ ಇನ್ನೂ ಅಸ್ವಸ್ಥಗೊಂಡಿದ್ದು, ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇಕ್ ತರಿಸಲಾದ ಅಂಗಡಿಯಾದ ಇದು ನಾನು ಕೊಟ್ಟ ಕೇಕ್ ಅಲ್ಲ ಎಂದು ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.