ಖರ್ಚಿಗೆ ಹಣ ಕೊಡದ ಉದ್ಯಮಿ ಅಪ್ಪನನ್ನು 16 ವರ್ಷದ ಬಾಲಕ ಮೂವರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉದ್ಯಮಿ ಮೊಹಮದ್ ನಯೀನಮ್ (50) ಎಂಬುವವರನ್ನು ಗುರುವಾರ ಮೂವರು ಅಪರಿಚಿತರು ಬೈಕ್ ನಲ್ಲಿ ಬಂದು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪ್ರತಾಪ್ ಗಢದ ಪಟ್ಟಿ ಎಂಬಲ್ಲಿ ಈ ಘಟನೆ ನಡೆದಿದ್ದು, ಸುಪಾರಿ ಪಡೆದು ಹತ್ಯೆ ಮಾಡಿದ್ದ ಪಿಯೂಶ್ ಪಾಲ್, ಶುಮಮನ್ ಸೋನಿ ಮತ್ತು ಪ್ರಿಯಾಂಶು ಅವರನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಹತ್ಯೆ ಮಾಡಿದ ಉದ್ಯಮಿಯ ಮಗ ಹತ್ಯೆ ಮಾಡಲು ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮುಂಗಡವಾಗಿ 1.5 ಲಕ್ಷ ರೂ. ನೀಡಿದ್ದು, ಕೊಲೆ ಮಾಡಿದ ನಂತರ 6 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದ ಎಂದು ತಿಳಿಸಿದ್ದಾರೆ.
ಪೊಲೀಸರು ಅಪ್ರಾಪ್ತ ಎಂಬ ಕಾರಣಕ್ಕೆ ಮಗನ ಹೆಸರನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ವಿಚಾರಣೆ ವೇಳೆ ಖರ್ಚಿಗೆ ಸಾಕಾಗುವಷ್ಟು ಅಪ್ಪ ಹಣ ಕೊಡದ ಕಾರಣ ಕೊಲೆ ಮಾಡಲು ಬಯಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಮನಬಂದಂತೆ ಖರ್ಚು ಮಾಡಲು ಅಂಗಡಿ, ಜ್ಯೂವೆಲರಿ ಅಂಗಡಿ ದೋಚಲು ಉದ್ದೇಶಿಸಿದ್ದೆ. ಆದರೆ ಇದಕ್ಕಿಂತ ಸುಲಭ ಅಪ್ಪನನ್ನೇ ಕೊಲ್ಲುವುದು ಎಂಬ ಕಾರಣಕ್ಕೆ ಸುಪಾರಿ ನೀಡಿದ್ದೆ ಎಂದು ಮಗ ವಿಚಾರಣೆ ವೇಳೆ ವಿವರಿಸಿದ್ದಾನೆ.