ಬ್ರಿಟನ್ ಪ್ರಧಾನಿ ಆಗಿರುವ ಭಾರತೀಯ ಮೂಲದ ರಿಷಿ ಸುನಕ್ ನೇತೃತ್ವದ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ಕಳಪೆ ಸೋಲಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ರಿಷಿ ಸುನಕ್ ನೇತೃತ್ವದ ಕನ್ಸರ್ವೆಟಿವ್ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ 18,000 ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಪ್ರತಿಪಕ್ಷವಾಗಿರುವ ಲೇಬರ್ ಪಾರ್ಟಿ 403 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಈ ಮೂಲಕ ವಿಶ್ವಾಸಮತ ಗಳಿಸಲು ಅಗತ್ಯವಾದ 326 ಸ್ಥಾನಗಳನ್ನು ನಿರಾಯಸವಾಗಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಯುಗೋ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಕೈರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ 201ಕ್ಕೂ ಹೆಚ್ಚು ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಸುನಕ್ ಅವರ ಕನ್ಸರ್ವೆಟಿವ್ ಪಕ್ಷ 210 ಸ್ಥಾನಗಳನ್ನು ಕಳೆದುಕೊಂಡು 155ಕ್ಕೆ ಕುಸಿಯಲಿದೆ.