ರೈತನ ಗುದನಾಳದಿಂದ 16 ಇಂಚಿನ ಸೋರೆಕಾಯಿಯನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದ ಘಟನೆ ಮಧ್ಯಪ್ರದೇಶದ ಛತ್ತಪುರದಲ್ಲಿ ನಡೆದಿದೆ.
ಜುಲೈ 21ರಂದು ಛತ್ತಪುರ ಜಿಲ್ಲಾಸ್ಪತ್ರೆಯ ವೈದ್ಯರು ಸುಮಾರು 2 ಗಂಟೆಗಳ ಶಸ್ತ್ರಚಿಕಿತ್ಸೆ ನಂತರ ರೈತನ ಹೊಟ್ಟೆಯಲ್ಲಿದ್ದ ಸೋರೆಕಾಯಿಯನ್ನು ಹೊರತೆಗೆದಿದ್ದಾರೆ.
ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ರೈತನಿಗೆ ವೈದ್ಯಕೀಯ ಪರೀಕ್ಷೆ ಮಾಡಿದ ವೈದ್ಯರು ಗುದನಾಳದಿಂದ ದೇಹದ ಒಳಗೆ ಸೇರಿದ್ದ ಸೋರೆಕಾಯಿ ಕರುಳಿಗೆ ಹಾನಿ ಮಾಡುತ್ತಿದ್ದನ್ನು ಪತ್ತೆ ಹಚ್ಚಿದರು.
ನಂದಕಿಶೋರ್ ಜಾಧವ್ ನೇತೃತ್ವದ ವೈದ್ಯರ ತಂಡ 2 ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಸೋರೆಕಾಯಿ ಹೊರತೆಗೆದಿದ್ದಾರೆ. ರೈತ ಆಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಗುದನಾಳದಲ್ಲಿ ಸೋರೆಕಾಯಿ ಹೇಗೆ ಹೋಯಿತು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಖಜುರಾಹೊ ಜಿಲ್ಲೆಯಿಂದ ಬಂದ ರೋಗಿ ಹೊಟ್ಟೆ ನೋವು ಎಂದು ಹೇಳಿದ. ಇದಕ್ಕೂ ಮೊದಲು ಆತ ಮತ್ತೊಂದು ಆಸ್ಪತ್ರೆಗೆ ಹೋಗಿದ್ದು, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಖಾಸಗಿ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದ ಎಂದು ವೈದ್ಯರು ತಿಳಿಸಿದ್ದಾರೆ.