ಜೈನ ಧರ್ಮದ ಗುಜರಾತ್ ನಲ್ಲಿ ಉದ್ಯಮಿ ಹಾಗೂ ಅವರ ಪತ್ನಿ ಸನ್ಯಾಸತ್ವ ಪಡೆಯಲು 200 ಕೋಟಿ ರೂ. ದಾನ ಮಾಡಿ ಸುದ್ದಿಯಾಗಿದ್ದಾರೆ.
ಗುಜರಾತ್ ನ ಹಿಮ್ಮತ್ ನಗರದ ನಿವಾಸಿ ಆಗಿರುವ ಭಂಡಾರಿ ಕುಟುಂಬದ ಗುತ್ತಿಗೆದಾರ ಆಗಿರುವ ಭವೇಶ್ ಭಂಡಾರಿ ಹಾಗೂ ಅವರ ಪತ್ನಿ ಸನ್ಯಾಸತ್ವ ಸ್ವೀಕರಿಸಿದ್ದು, ಇದೀಗ ಮೋಕ್ಷಕ್ಕಾಗಿ ಎಲ್ಲಾ ಸಂಪತ್ತನ್ನು ದಾನ ಮಾಡಿ ಪುಣ್ಯಕ್ಷೇತ್ರಗಳ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ.
ತನ್ನ 19 ವರ್ಷ ಮಗ ಹಾಗೂ 16 ವರ್ಷದ ಮಗಳು 2022ರಲ್ಲಿ ಸನ್ಯಾಸತ್ವ ಪಡೆದಿದ್ದರು. ಇದೀಗ ಮಕ್ಕಳ ಹಾದಿಯಲ್ಲೇ ನಡೆಸಲು ಆರಂಭಿಸಿರುವ ದಂಪತಿ ಅಪಾರ ಪ್ರಮಾಣದ ತಮ್ಮ ಸಂಪತ್ತನ್ನು ದಾನ ಮಾಡಿದ್ದಾರೆ.
ಏಪ್ರಿಲ್ 2022ರಂದು 32 ಜನರ ಜೊತೆ ಸನ್ಯಾಸತ್ವ ಸ್ವೀಕರಿಸಿದ್ದ ಭಂಡಾರಿ ದಂಪತಿ ಇದೀಗ ಎಲ್ಲಾ ಸಾಂಸರಿಕ ಚೌಕಟ್ಟಿನಿಂದ ಹೊರಗೆ ಬಂದಿದ್ದು, ಇದೀಗ ಎಲ್ಲಾ ಸಂಬಂಧಗಳಿಂದ ಮುಕ್ತಿ ಪಡೆದು ಮೋಕ್ಷಾಕ್ಕಾಗಿ ಪ್ರಯತ್ನಿಸಲಿದ್ದಾರೆ.
ದಂಪತಿ ಬಳಿ ಇದೀಗ ಕೇವಲ ಎರಡು ಗಾರ್ಮೆಂಟ್ಸ್ ಕಾರ್ಖಾನೆಗಳು ಮಾತ್ರ ಇವೆ. ಜೈನ ಧರ್ಮದಲ್ಲಿ ದೀಕ್ಷೆ ಪಡೆದರೆ ಅವರು ಧರ್ಮ ಪ್ರಚಾರ ಹಾಗೂ ಸಾಂಸರಿಕ ಜೀವನದಿಂದ ಹೊರಗೆ ಬಂದು ಬದ್ಧತೆಯಿಂದ ಇರಬೇಕಾಗುತ್ತದೆ.