Friday, November 22, 2024
Google search engine
Homeತಾಜಾ ಸುದ್ದಿ317 ಕೆಜಿ ತೂಕದ ವ್ಯಕ್ತಿ 34ನೇ ವಯಸ್ಸಿಗೆ ನಿಧನ

317 ಕೆಜಿ ತೂಕದ ವ್ಯಕ್ತಿ 34ನೇ ವಯಸ್ಸಿಗೆ ನಿಧನ

ವಿಶ್ವದ ಅತ್ಯಂತ ತೂಕದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬ್ರಿಟನ್ ನ ಜೇಸನ್ ಹಾಲ್ಟನ್ ಅಂಗಾಂಗ ವೈಫಲ್ಯದಿಂದ 34ನೇ ವಯಸ್ಸಿಗೆ ನಿಧನರಾಗಿದ್ದಾರೆ.

ಸರ್ರೆಯ ನಿವಾಸಿ ಜೇಸನ್ ಹಾಲ್ಟನ್ 34ನೇ ಹುಟ್ಟುಹಬ್ಬಕ್ಕೂ ವಾರದ ಮುನ್ನ ನಿಧನರಾಗಿದ್ದಾರೆ.

ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೇಸನ್ ಅವರನ್ನು 6 ಅಗ್ನಿಶಾಮಕ ದಳದ ವಾಹನಗಳ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲದೇ ಒಂದು ಗಸ್ತು ವಾಹನ ಜೊತೆಗೆ ಇತ್ತು ಎಂದು ಜೇಸನ್ ತಾಯಿ ಲೀಸಾ ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಿಸಿದಾಗ ಮೊದಲಿಗೆ ಕಿಡ್ನಿ ವಿಫಲಗೊಂಡಿದೆ ಎಂದು ವೈದ್ಯರು ಹೇಳಿದ್ದರು. ಒಂದು ವಾರದ ನಂತರ ಜೇಸನ್ ವಿಧಿವಶರಾಗಿದ್ದಾರೆ ಎಂದು ಘೋಷಿಸಿದರು. ಸುಮಾರು 8 ಬಾರಿ ಅವನಿಗೆ ಜೀವದಾನ ಆಗಿದೆ. ಈ ಬಾರಿಯೂ ವೈದ್ಯರು ಪ್ರಯತ್ನ ಪಟ್ಟಿದ್ದರೆ ಉಳಿಸಿಕೊಳ್ಳಬಹುದಿತ್ತು. ಆದರೆ ಆಗಲಿಲ್ಲ ಎಂದು ಲೀಸಾ ಕಣ್ಣೀರು ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments