ಕಳೆದ 9 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇರುವ ಸೇತುವೆ ಮೂರನೇ ಬಾರಿ ಕುಸಿದು ಬಿದ್ದ ಬಿಹಾರದಲ್ಲಿ ನಡೆದಿದೆ.
ಸುಲ್ತಾನ್ ಘಂಜ್- ಅಂಗ್ವಾನಿ ಘಾಟ್ ಸೇತುವೆಯ ಒಂದು ಭಾಗ ಗಂಗಾನದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಕಳೆದ 9 ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಈ ಸೇತುವೆ ಪದೇಪದೆ ಕುಸಿದು ಬೀಳುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಬಿಹಾರದ ಹಲವಾರು ಸೇತುವೆ ದಿನಕ್ಕೊಂದರಂತೆ ಕುಸಿದು ಬೀಳುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸೇತುವೆಗಳು ಪದೇಪದೆ ಕುಸಿದು ಬೀಳುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಸಿಎಂ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದರು. ಆದರೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ.