ನಿರ್ದೇಶಕ ಅರ್ಜುನ್ ಹೆಸರು ಕೈಬಿಟ್ಟು ಪ್ರಚಾರ ಮಾಡದಂತೆ ಹೈಕೋರ್ಟ್ ಸೂಚನೆ ನೀಡುವ ಮೂಲಕ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರದ ಪ್ರಚಾರ ವಿವಾದದಲ್ಲಿ ನಿರ್ದೇಶಕ ಎಪಿ ಅರ್ಜುನ್ ಅವರಿಗೆ ತಾತ್ಕಾಲಿಕ ಜಯ ಲಭಿಸಿದೆ.
ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಎಂ ಜಿ ಉಮಾರ ಅವರನ್ನೊಳಗೊಂಡ ರಜಕಾಲದ ವಿಭಾಗೀಯ ಫೀಠ ಶುಕ್ರವಾರ ಆದೇಶ ನೀಡಿದೆ.
ಧ್ರುವ ಸರ್ಜಾ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಅಕ್ಡೋಬರ್ 11ರಂದು ಬಿಡುಗಡೆ ಆಗುತ್ತಿದ್ದು ಈ ಹಿನ್ನೆಲೆಯಲ್ಲಿ ನಿರ್ದೇಶಕ ಎಪಿ ಅರ್ಜುನ್ ಅವರಿಗೆ ಒಲಿದ ಮಹತ್ವದ ಗೆಲುವಾಗಿದೆ.
ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರ ಎಂಬ ಟೈಟಲ್ ಕಾರ್ಡ್ ನಲ್ಲಿ ಅರ್ಜುನ್ ಹೆಸರು ತೆಗೆದು ಪ್ರಚಾರ ನಡೆಸಲು ನಿರ್ಮಾಪಕರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರು ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಚಾರದಲ್ಲಿ ನಿರ್ದೇಶಕರ ಹೆಸರು ಇರಬೇಕು. ಅವರಚಹೆಸರನ್ನು ಕೈಬಿಡದಂತೆ ಹೈಕೋರ್ಟ್ ಆದೇಶ ನೀಡಿದೆ.
ಸಿನಿಮಾ ಸಂಬಂಧಿಸಿದ ಒಪ್ಪಂದಗಳನ್ನು ನಿರ್ಮಾಪಕರು ಪಾಲಿಸಿಲ್ಲವೆಂದು ವಾದ ಮಂಡಿಸಿದ ಅರ್ಜುನ್ ಪರ ವಕೀಲರು ನಿರ್ದೇಶಕರ ಹೆಸರು ಕೈಬಿಟ್ಟು ಚಿತ್ರ ಬಿಡುಗಡೆ ಮಾಡದಂತೆ ನಿರ್ಬಂಧ ಕೋರಿಕೆ ಕೋರ್ಟ್ ಮೆಟ್ಟಿಲೇರಿದ್ದರು.
ಎ.ಪಿ.ಅರ್ಜುನ್ ಪರ ಹಿರಿಯ ವಕೀಲ ಉದಯ್ ಹೊಳ್ಳ, ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ನಿರ್ಮಾಪಕ ಮೆ. ಉದಯ್ ಮೆಹ್ತಾ, ವಾಸವಿ ಎಂಟರ್ ಪ್ರೈಸಸ್ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.