ಇದೇನು ಕರ್ನಾಟಕವೋ? ಪಾಕಿಸ್ತಾನವೋ? ಕನ್ನಡ ಗೊತ್ತಿಲ್ಲದವರೆಲ್ಲಾ ಡೆಲಿವರಿ ಬಾಯ್ ಆಗಿದ್ದಾರೆ ಎಂದು ಬೆಂಗಳೂರಿನ ಮಹಿಳೆ ಸ್ವಿಗ್ಗಿ ಸಂಸ್ಥೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಭಾಷೆ ಗೊತ್ತಿಲ್ಲದ ಡೆಲಿವರಿ ಬಾಯ್ ಗಳಿಂದ ತುಂಬಾ ಹಿಂಸೆ ಆಗುತ್ತಿದೆ ಎಂದು ಮಹಿಳೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಅನ್ಯ ಭಾಷಿಗರ ಪ್ರಭಾವ ಹಾಗೂ ಕನ್ನಡ ಭಾಷಾ ಕುರಿತ ಚರ್ಚೆ ಕಾವೇರುವಂತೆ ಮಾಡಿದೆ.
ಬೆಂಗಳೂರು ಕರ್ನಾಟಕದಲ್ಲಿ ಇದೆಯೋ ಅಥವಾ ಪಾಕಿಸ್ತಾನದಲ್ಲೋ? ನಿಮ್ಮ ಡೆಲಿವರಿ ಬಾಯ್ ಗೆ ಕನ್ನಡ ಮಾತನಾಡೋಕೆ ಬರಲ್ಲ ಕನ್ನಡ ಅರ್ಥನೂ ಆಗಲ್ಲ. ಇಂಗ್ಲೀಷ್ ಕೂಡ ಬರೋದಿಲ್ಲ. ನೀವು ಡೆಲಿವರಿ ಬಾಯ್ ಗಳ ರಾಜ್ಯ ಭಾಷೆಯಾದ ಹಿಂದಿ ಅಥವಾ ಬೇರೆ ಯಾವುದೋ ಭಾಷೆ ಕಲಿಯಬೇಕು ಎಂದು ಬಯಸುತ್ತಿರಾ? ನೀವು ನಮ್ಮ ಮೇಲೆ ಈ ರೀತಿ ಒತ್ತಡ ಹಾಕುವುದನ್ನು ನಿಲ್ಲಿಸಿ, ಅದರ ಬದಲು ನಿಮ್ಮ ಡೆಲಿವರಿ ಬಾಯ್ ಗಳಿಗೆ ಕನ್ನಡ ಕಲಿಸುವ ಕೆಲಸ ಮಾಡಿ ಎಂದು ರೇಖಾ ಎಂಬ ಮಹಿಳೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೇಖಾ ಅವರ ಪೋಸ್ಟ್ ವೈರಲ್ ಆಗಿದ್ದು, 2.5 ಲಕ್ಷ ಜನರು ವೀಕ್ಷಿಸಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಪ್ರಭಾವ ಹಾಗೂ ಹಿಂದಿ ಭಾಷೆ ಹೇರಿಕೆ ಕುರಿತು ಚರ್ಚೆ ಆರಂಭಗೊಂಡಿದೆ.
ರೇಖಾ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಅಂಕಿತ್, ಬೆಂಗಳೂರಿನಲ್ಲಿ ಜೊಮೊಟೊ, ಸ್ವಿಗ್ಗಿ ಸೇರಿದಂತೆ ವಿವಿದೆಡೆ ಕೆಲಸ ಕೊಡಿಸಲು ಸುಮಾರು 53 ಕಂಪನಿಗಳು ಸೂರತ್, ಲಕ್ನೋ ಮತ್ತು ಇಂದೋರ್ ನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಬೆಂಗಳೂರು ಐಟಿ ಹಬ್ ಆಗಿದ್ದು, ಜಗತ್ತಿನಾದ್ಯಂತ ಉದ್ಯೋಗ ಸೃಷ್ಟಿಯಲ್ಲಿ ಮುಂದಿದೆ. ಇದರ ಲಾಭ ಕನ್ನಡಿಗರಿಗೆ ಆಗುವುದಕ್ಕಿಂತ ಹೆಚ್ಚಾಗಿ ಅನ್ಯ ಭಾಷಿಗರು ಪಡೆಯುತ್ತಿದ್ದಾರೆ.