ಬಸ್ಸಲ್ಲಿ ಮೊಬೈಲ್ ಚಾರ್ಜಿಂಗ್ ಹಾಕಿದ್ದ 18 ವರ್ಷದ ಬಾಲಕ ಕರೆಂಟ್ ಹೊಡೆದು ಮೃತಪಟ್ಟ ಆಘಾತಕಾರಿ ಘಟನೆ ಮಲೇಷ್ಯಾದಲ್ಲಿ ಸಂಭವಿಸಿದೆ.
ನವೆಂಬರ್ 1ರಂದು ಬಟರ್ ವರ್ಥ್ ಪ್ರದೇಶದ ಪೆನಾಂಗ್ ಸೆಂಟ್ರಲ್ ನ ಟರ್ಮಿನಲ್ ನಲ್ಲಿ ಕೌಲಾಂಲಂಪುರಕ್ಕೆ ಹೊರಟ ಬಸ್ ಅನ್ನು ಯುವಕ ಏರಿದ ಕೆಲವೇ ನಿಮಿಷಗಳಲ್ಲಿ ದುರ್ಘಟನೆ ಸಂಭವಿಸಿದೆ.
ಯುವಕ ಕಿರುಚಾಡುತ್ತಿದ್ದನ್ನು ಕೇಳಿಸಿಕೊಂಡ ಸಹ ಪ್ರಯಾಣಿಕರು ನೋಡಿದಾಗ ಯುವಕನ ಬಾಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿ ಕೂಡಲೇ ತುರ್ತು ಕರೆ ಮಾಡಿದರು. ತುರ್ತು ವೈದ್ಯಕೀಯ ಸೇವಾ ತಂಡ ಕೂಡಲೇ ಆಗಮಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿಮಧ್ಯದಲ್ಲೇ ಯುವಕ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.
ಮರಣೋತ್ತರ ಪರೀಕ್ಷೆಯಲ್ಲಿ ಯುವಕ ಕರೆಂಟ್ ಹೊಡೆದು ಮೃತಪಟ್ಟಿರುವುದು ದೃಢಪಟ್ಟಿದೆ. ಅಲ್ಲದೇ ಬಸ್ ನಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ವಯರ್ ಸುಟ್ಟು ಹೋಗಿದ್ದು, ಯುವಕನ ಎಡಗೈ ಸುಟ್ಟ ಗಾಯವಾಗಿತ್ತು.
ಪೊಲೀಸರು ಘಟನೆಯ ಕುರಿತು ತನಿಖೆ ಕೈಗೆತ್ತಿಕೊಂಡಿದ್ದು, ಬಸ್ ನಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತು ಗಮನ ಹರಿಸಲಿದ್ದಾರೆ. ಅಲ್ಲದೇ ಬಸ್ ನಲ್ಲಿ ಮೊಬೈಲ್ ಹಾಕುವುದು ಎಷ್ಟು ಸುರಕ್ಷಿತ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದೆ.