ಲೈಂಗಿಕ ಸಂಪರ್ಕದ ವೇಳೆ ಯುವತಿಯ ಗುಪ್ತಾಂಗದಲ್ಲಿ ರಕ್ತಸ್ರಾವ ಉಂಟಾದಾಗ ಗೆಳೆಯ ಆಂಬುಲೆನ್ಸ್ ಕರೆಸುವ ಬದಲು ಆನ್ ಲೈನ್ ನಲ್ಲಿ ಔಷಧಕ್ಕಾಗಿ ಹುಡುಕಾಟ ನಡೆಸಿದ್ದರಿಂದ ಯುವತಿ ಮೃತಪಟ್ಟ ಆಘಾತಕಾರಿ ಘಟನೆ ಗುಜರಾತ್ ನಲ್ಲಿ ಸಂಭವಿಸಿದೆ.
23 ವರ್ಷದ ನರ್ಸಿಂಗ್ ಪದವೀಧರ ಯುವತಿ ಅಹಮದಾಬಾದ್ ನ ಖಾಸಗಿ ಹೋಟೆಲ್ ನಲ್ಲಿ ಮೃತಪಟ್ಟಿದ್ದರೆ, 26 ವರ್ಷದ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೇಮಿಗಳು ಸೆಪ್ಟೆಂಬರ್ 23ರಂದು ನವಸಾರಿ ಜಿಲ್ಲೆಯ ಲಾಡ್ಜ್ ನಲ್ಲಿ ಸೇರಿದ್ದರು. ಸೆಕ್ಸ್ ವೇಳೆ ಯುವತಿಯ ಗುಪ್ತಾಂಗದಲ್ಲಿ ರಕ್ತಸ್ರಾವ ಉಂಟಾಗಿದೆ. ಇದರಿಂದ ಆತಂಕಗೊಂಡ ಯುವಕ ಆಸ್ಪತ್ರೆಗೆ ಕರೆ ಮಾಡಿ ಆಂಬುಲೆನ್ಸ್ ಕರೆಸುವ ಬದಲು ಆನ್ ಲೈನ್ ನಲ್ಲಿ ಚಿಕಿತ್ಸೆ ಕೊಡುವುದು ಹೇಗೆ? ರಕ್ತಸ್ರಾವ ನಿಲ್ಲಿಸುವುದು ಹೇಗ? ಔಷಧ ಯಾವುದು ಎಂದು ಹುಡುಕಾಡಿದ್ದಾನೆ.
ರಕ್ತಸ್ರಾವ ನಿಲ್ಲಿಸಲು ಬಟ್ಟೆ ಬಳಸಿದ್ದಾರೆ. ಅದರಿಂದ ಯಾವುದೇ ಪ್ರಯೋಜನವಾಗದ ಕಾರಣ ಯುವತಿ ಮೂರ್ಛೆ ಹೋಗಿದ್ದಾಳೆ. ಕೂಡಲೇ ಸ್ನೇಹಿತನನ್ನು ಕರೆಸಿಕೊಂಡ ಯುವಕ, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾನೆ.
ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯುವತಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸರು ಯುವತಿಯ ದೇಹವನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸೂರತ್ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ ಮತ್ತು ಯುವಕನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.