Friday, November 22, 2024
Google search engine
Homeಅಪರಾಧಮದುವೆಗೆ ಮೇಕಪ್ ಗೆ ತೆರಳಿದ್ದ ಯುವತಿಗೆ ಮಾಜಿ ಪ್ರಿಯಕರ ಗುಂಡಿಕ್ಕಿ ಹತ್ಯೆ!

ಮದುವೆಗೆ ಮೇಕಪ್ ಗೆ ತೆರಳಿದ್ದ ಯುವತಿಗೆ ಮಾಜಿ ಪ್ರಿಯಕರ ಗುಂಡಿಕ್ಕಿ ಹತ್ಯೆ!

ಮದುವೆಗೆ ಮೇಕಪ್ ಮಾಡಿಕೊಳ್ಳಲು ಬಂದಿದ್ದ ಯುವತಿಗೆ ಬ್ಯೂಟಿಪಾರ್ಲರ್ ಒಳಗೆ ನುಗ್ಗಿದ ಮಾಜಿ ಪ್ರಿಯಕರ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ನಿವಾಸಿ ಕಾಜೋಲ್ ಹತ್ಯೆಗೀಡಾದ ಯುವತಿ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಬ್ಯೂಟಿ ಪಾರ್ಲರ್ ಒಳಗೆ ಬರುವ ನುಗ್ಗುವ ಮುನ್ನ ಕೈ ಹಾಗೂ ಮುಖ ಮುಚ್ಚಿಕೊಂಡಿದ್ದ ದೀಪಕ್ ಎಂಬಾತ, ಕಾಜೋಲ್ ಹೊರಗೆ ಬಾ. ನನಗೆ ಯಾಕೆ ಮೋಸ ಮಾಡಿದೆ ಎಂದು ಕಿರುಚಾಡಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನನ್ನ ತಂಗಿ ಮದುವೆಗೆ ಸಿದ್ಧವಾಗುತ್ತಿದ್ದಳು. ನನ್ನ ಜೊತೆ ಬಾ ಅಂತ ಆತ ಕರೆಯುತ್ತಿದ್ದ. ಆಕೆ ನಿರಾಕರಿಸಿದಾಗ ಗನ್ ತೆಗೆದು ಆಕೆಯ ಮೇಲೆ ಗುಂಡು ಹಾರಿಸಿದ ಎಂದು ಮೃತ ಕಾಜೋಲ್ ಸೋದರಿ ವಿವರಿಸಿದ್ದಾಳೆ. ದೀಪಕ್ ಗುಂಡು ಹಾರಿಸಿ ನಾಪತ್ತೆಯಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments