ಬಾಲಿವುಡ್ ನಟಿ ಮಲೈಕಾ ಆರೋರಾ ಅವರ ತಂದೆ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಬಾಂಧ್ರಾದಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನ ಮೇಲಿಂದ ಜಿಗಿದು ಅನಿಲ್ ಆರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧಬಾರ ಬೆಳಿಗ್ಗೆ 9 ಗಂಟೆಗೆ ಈ ಘಟನೆ ನಡೆದಿದ್ದು, ಮಲೈಕಾ ಆರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ಮಗು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮಲೈಕಾ ಆರೋರಾ ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ್ದು, 11 ವರ್ಷದವಳಾಗಿದ್ದಾಗ ಪೋಷಕರು ಡಿವೋರ್ಸ್ ಪಡೆದಿದ್ದರು. ತಾಯಿ ಜೊತೆ ಮುಂಬೈಗೆ ಆಗಮಿಸಿ ಅಲ್ಲಿಯೇ ನೆಲೆಸಿದ್ದರು.