ಪಂಚೆ ಧರಿಸಿ ಬಂದಿದ್ದಕ್ಕಾಗಿ ರೈತನಿಗೆ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಚಪಲಿ ಧರಿಸಿ ಬಂದಿದ್ದಕ್ಕಾಗಿ ಬೆಂಗಳೂರು ಕೆಫೆ ಕಂಪನಿಯೊಂದರ ಸಿಇಒಗಳನ್ನೇ ಪ್ರವೇಶ ನಿರ್ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.
ಫ್ರೀಡೋ ಸಂಸ್ಥಾಪಕ ಮತ್ತು ಸಿಇಒ ಗಣೇಶ್ ಸೋನಾವಾನೆ ಮತ್ತು ಆಥೆರ್ ಸಹ ಸಂಸ್ಥಾಪಕ ಸ್ವಪ್ನಿಲ್ ಜೈನ್ ವಸ್ತ್ರ ಸಂಹಿತೆ ಅನುಸರಿಸದ ಕಾರಣ ನಮ್ಮನ್ನು ಬೆಂಗಳೂರಿನ ರೆಸ್ಟೋರೆಂಟ್ ನಲ್ಲಿ ಪ್ರವೇಶ ನಿರಾಕರಿಸಿದ ಘಟನೆಯನ್ನು ಎಕ್ಸ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿ ರೆಸ್ಟೋರೆಂಟ್ ಘಟನೆಯನ್ನು ಗಣೇಶ್ ಸೋನಾವಾನೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಶೂಗಳ ಬದಲಿಗೆ ನಾವು ಚಪ್ಪಲಿ ಧರಿಸಿ ಹೋಗಿದ್ದೆವು. ಚಪ್ಪಲಿ ಧರಿಸಿದ ಕಾರಣಕ್ಕಾಗಿ ನಮಗೆ ರೆಸ್ಟೋರೆಂಟ್ ಗೆ ಪ್ರವೇಶ ನಿರಾಕರಿಸಲಾಯಿತು. ಆದರೆ ನಾವು ಇದನ್ನು ದೊಡ್ಡ ವಿಷಯ ಮಾಡದೇ ಅವರಿಗೆ ಗೌರವ ಕೊಟ್ಟು ಬೇರೆ ರೆಸ್ಟೋರೆಂಟ್ ಗೆ ಹೋದೆವು ಎಂದು ಹೇಳಿಕೊಂಡಿದ್ದಾರೆ.
ನಾವು ರೆಸ್ಟೋರೆಂಟ್ ಗೆ ಹೋದಾಗ ಚಪ್ಪಲಿ ಧರಿಸಿದ್ದೇವು ಎಂಬ ಕಾರಣಕ್ಕೆ ಒಳಗೆ ಪ್ರವೇಶಿಸಲು ಬಿಡಲಿಲ್ಲ. ನಾವು ಅದನ್ನು ಗೌರವಿಸಿ ಬೇರೆಡೆಗೆ ಹೋದೆವು. ಅದನ್ನು ತಾರತಮ್ಯ ಎಂದು ಕರೆಯಲಿಲ್ಲ. ಅದನ್ನು ದೊಡ್ಡ ವಿಷಯ ಮಾಡುವ ಪ್ರಯತ್ನ ಮಾಡಲಿಲ್ಲ. ಕೇವಲ ಒಂದು ಘಟನೆ ಅಂತ ಹಂಚಿಕೊಂಡಿದ್ದೇವೆ ಎಂದು ಸೋನಾವಾನೆ ಹೇಳಿಕೊಂಡಿದ್ದಾರೆ.
ಸೋನಾವಾನೆ ಅವರ ಪೋಸ್ಟ್ ಅನ್ನು 78 ಸಾವಿರ ಮಂದಿ ವೀಕ್ಷಿಸಿದ್ದು, 500ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 2010ರ ಘಟನೆ ನನಗೆ ನೆನಪಿದೆ, ನೀವು ಸೈಕಲ್ನಲ್ಲಿ ಬಂದರೆ ಮಾಲ್ಗಳು ನಿಮ್ಮನ್ನು ಒಳಗೆ ನಿಲ್ಲಿಸಲು ಬಿಡಲಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು.
ಶೂ ವಿರುದ್ಧ ಚಪ್ಪಲಿ ವಿಷಯವು ನಿಜವಾಗಿದೆ ಮತ್ತು ಪ್ರತಿ ನಗರದ ಕೆಲವು ಸ್ಥಳಗಳು ಹೊಂದಿರುವ ಡ್ರೆಸ್ ಕೋಡ್ ಉಡುಪಿನ ಒಂದು ಭಾಗವಾಗಿದೆ ಮತ್ತು ನಾವು ದೂರು ನೀಡುವ ಬದಲು ಪಾಲಿಸಬೇಕು. ಮಾಲ್ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಇದು ಸಮಸ್ಯೆಯಾಗಿದೆ ಎಂದು ನಾನು ನೋಡುತ್ತೇನೆ, ಸಾಂಪ್ರದಾಯಿಕ ಉಡುಗೆಯಲ್ಲಿ ಯಾರನ್ನಾದರೂ ಅನುಮತಿಸದಿರುವುದು ಒಂದು ಸಮಸ್ಯೆಯಾಗಿದೆಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.