ದೇಶದ ಮೂಲೆ ಮೂಲೆಗೂ ಇವಿಎಂ ಮತ್ತು ಚುನಾವಣಾ ಸಿಬ್ಬಂದಿ ತಲುಪಿಸುವ ಮೂಲಕ ದೇಶಾದ್ಯಂತ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ಏರ್ ಇಂಡಿಯಾ ಸದ್ದಿಲ್ಲದೇ ಮಹತ್ವದ ಪಾತ್ರ ವಹಿಸಿದೆ.
ಹೌದು, ಏರ್ ಇಂಡಿಯಾ ಸಂಸ್ಥೆ ಕೇಂದ್ರ ಚುನಾವಣಾ ಆಯೋಗಕ್ಕಾಗಿ 1000 ಗಂಟೆ ಹಾರಾಟ ನಡೆಸಿದ್ದು, 1750 ಟ್ರಿಪ್ ಮಾಡಿ ದೇಶದ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆದಿದೆ.
ಎಂಐ-17 ಮಧ್ಯಮ ತೂಕದ ಹಾರಾಟದ ಹೆಲಿಕಾಫ್ಟರ್, ಹಗುರ ಹೆಲಿಕಾಫ್ಟರ್ (ಚೇತಕ್), ಅತ್ಯಾಧುನಿಕ ಹಗುರ ಹೆಲಿಕಾಫ್ಟರ್ (ಎಎಲ್ ಎಚ್ ಧ್ರುವ) ಗಳನ್ನು ಚುನಾವಣಾ ಸಂದರ್ಭದಲ್ಲಿ ಬಳಸಲಾಗಿದೆ.