ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ಧೋವಲ್ ಸತತ ಮೂರನೇ ಬಾರಿ ಮರುನೇಮಕಗೊಂಡಿದ್ದರೆ, ಪಿಕೆ ಮಿಶ್ರಾ ಪ್ರಧಾನ ಮಂತ್ರಿ ಪ್ರಿನ್ಸಿಪಾಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಾರೆ.
ಜೂನ್ 10ರಿಂದ ಜಾರಿಗೆ ಬರುವಂತೆ ಪ್ರಧಾನಮಂತ್ರಿ ಪ್ರಿನ್ಸಿಪಾಲ್ ಸೆಕ್ರೆಟರಿಯಾಗಿ ಪಿಕೆ ಮಿಶ್ರಾ ನೇಮಕಗೊಂಡಿದ್ದು, ಧೋವಲ್ ಮತ್ತು ಪಿಕೆ ಮಿಶ್ರಾ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ದೊರೆಯಲಿದೆ.
ಧೋವಲ್ ಮತ್ತು ಮಿಶ್ರಾ ಅವರ ನೇಮಕ ಅವಧಿ ನಮೂದಿಸಲಾಗಿಲ್ಲ. ಆದ್ದರಿಂದ ನರೇಂದ್ರ ಮೋದಿ ಪ್ರಧಾನಿ ಹುದ್ದೆಯಲ್ಲಿ ಇರುವವರೆಗೂ ಇವರು ಈ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ಇದೇ ವೇಳೆ ಪ್ರಧಾನ ಮಂತ್ರಿ ಸಲಹೆಗಾರರಾಗಿ ಅಮಿತ್ ಖಾರೆ ಮತ್ತು ತರುಣ್ ಕಪೂರ್ ಅವರನ್ನು ಮುಂದುವರಿಸಲಾಗಿದೆ.
1968ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಅಜಿತ್ ಧೋವಲ್ 2014ರಿಂದ ಎನ್ ಎಸ್ ಎ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.