ಓಸಾಮ ಬಿನ್ ಲಾಡೆನ್ ಆಪ್ತ ಹಾಗೂ ಅಲ್ ಖೈದಾ ಮುಖಂಡ ಅಮಿನ್ ಉಲ್ ಹಕ್ ನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಅಮರಿಕದಲ್ಲಿ ನಡೆದ 9/11ರ ದಾಳಿಯ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬರಾಗಿರುವ ಅಮಿನ್ ಉಲ್ ಹಕ್ ವಿಶ್ವಸಂಸ್ಥೆ ಪ್ರಕಟಿಸಿದ ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಪಾಕಿಸ್ತಾನ ಉಗ್ರರ ವಿರುದ್ಧ ನಡೆಸಿರುವ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ.
ಅಲ್ ಖೈದಾ ವಿರುದ್ಧ ಪಾಕಿಸ್ತಾನ ಹಲವಾರು ವರ್ಷಗಳ ನಂತರ ಕಾರ್ಯಾಚರಣೆ ನಡೆಸಿರುವುದು ವಿಶೇಷ. ಅಮಿನ್ ಉಲ್ ಹಕ್ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ದಾಳಿಗಳ ಹಿಂದೆ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.