ನೆಚ್ಚಿನ ನಟಿಯಂತೆ ಕಾಣಲು 18 ವರ್ಷದ 18 ವರ್ಷದ ಯುವತಿ 5,63,000 ಡಾಲರ್ (4.6 ಕೋಟಿ ರೂ.) ವೆಚ್ಚ ಮಾಡಿ 100ಕ್ಕೂ ಅಧಿಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.
ಹೌದು, ಚೀನಾದ ಜಿಯಾಂಗ್ ನಗರದಲ್ಲಿ ಚೀನಾದ ಸ್ಟಾರ್ ನಟ ಇಸ್ತಾರ್ ಯೂ ನಂತೆ ಕಾಣಲು 5 ವರ್ಷದಿಂದ ಸತತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ.
ನೆಚ್ಚಿನ ಸ್ಟಾರ್ ನಟಿಯಂತೆ ಕಾಣಬೇಕು ಎಂದು ಚುನಾ ಎಂಬಾತ ಮೊದಲ ಬಾರಿ 13ನೇ ವಯಸ್ಸಿಗೆ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 100ಕ್ಕೂ ಅಧಿಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದಕ್ಕಾಗಿ ಹೆತ್ತವರು ದುಡಿದ ಸುಮಾರು 4 ಕೋಟಿ ರೂ. ವೆಚ್ಚ ಮಾಡಿದ್ದಾಳೆ.
ಚುನಾ ಸಣ್ಣ ವಯಸ್ಸಿನಿಂದ ತನ್ನ ಸೌಂದರ್ಯದ ಬಗ್ಗೆ ಕೀಳರಿಮೆ ಹೊಂದಿದ್ದು, ನಾನು ಚೆನ್ನಾಗಿ ಕಾಣಬೇಕು ಎಂದು ಹಂಬಲಿಸುತ್ತಿದ್ದಳು. ಶಾಂಘೈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನನಗಿಂತ ಸಹಪಾಠಿಗಳೇ ಸುಂದರವಾಗಿದ್ದಾರೆ ಎಂದು ಕೊರಗುತ್ತಿದ್ದಳು.
ಸಹಪಾಠಿಗಳು ನನಗಿಂತ ಸುಂದರವಾಗಿದ್ದಾರೆ ಎಂಬುದು ನಂತರದ ದಿನಗಳಲ್ಲಿ ಹೊಟ್ಟೆಕಿಚ್ಚಿಗೆ ಕಾರಣವಾಗಿದ್ದು, ಅವರಿಗಿಂತ ಚೆನ್ನಾಗಿ ಕಾಣಲು ಅವಳ ನೆಚ್ಚಿನ ನಟಿ ಇಸ್ತಾರ್ ಯೂ ಆದರ್ಶ ಮಾಡಿಕೊಂಡಿದ್ದು, ನಾನು ಆಕೆಯಂತೆ ಸುಂದರವಾಗಿ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರ ಮಾಡಿದ್ದಾಳೆ. ನಂತರ ಪ್ರತಿ ಬಾರಿ ಸರಿ ಆಗಲಿಲ್ಲ ಎಂದು ಪದೆಪದೆ ಚಿಕಿತ್ಸೆಗೆ ಒಳಗಾಗಿದ್ದಾಳೆ.
ಪದೇಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೂ ಸ್ಟಾರ್ ನಟಿಯಂತೆ ಆಗದೇ ಇರುವುದು ಆಕೆಗೆ ಬೇಸರವಾಗಿದೆ. ಅದೇ ರೀತಿ ಪ್ಲಾಸ್ಟಿಕ್ ಸರ್ಜರಿಯಿಂದಲೂ ಬೇಸತ್ತಿದ್ದು, ಇದರಿಂದ ಹೊರಗೆ ಬರುವ ಮನಸ್ಸು ಮಾಡಿದ್ದಾಳೆ.
ನಾನು 100ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದೇನೆ. ಕಣ್ಣು ದೊಡ್ಡದು ಕಾಣುವಂತೆ ಮಾಡಿಕೊಂಡಿದ್ದೇನೆ. ಮೂಳೆ ಶೇವಿಂಗ್ ಸೇರಿದಂತೆ ಹಲವು ರೀತಿಯ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದೇನೆ. ಆದರೆ ಎಲ್ಲದಕ್ಕಿಂತ ಕಷ್ಟದ್ದು ಮೂಳೆ ಶೇವಿಂಗ್. ಸುಮಾರು ಪ್ರತಿದಿನ 8 ಗಂಟೆಯಂತೆ 15 ದಿನಗಳ ಕಾಲ ಮೂಳೆಯನ್ನು ಕೊರೆಸಿ ಸಣ್ಣದು ಮಾಡಿಕೊಂಡಿರುವುದು ಸಹಿಸಲು ಅಸಾಧ್ಯ ಎಂದು ಚುನಾ ತನ್ನ ಅನುಭವ ಹಂಚಿಕೊಂಡಿದ್ದಾಳೆ.
ಪದೇಪದೆ ಶಸ್ತ್ರಚಿಕಿತ್ಸೆಯಿಂದ ಹೆದರಿದ ತಾಯಿ ಈಗ ಪ್ಲಾಸ್ಟಿಕ್ ಸರ್ಜರಿ ನಿಲ್ಲಿಸಿದ್ದಾರೆ. ತಂದೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೋಂದು ರೀತಿಯ ಉತ್ಪನ್ನ ಬಳಸುವುದು ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಅಪಾಯ ಎಂದು ಎಚ್ಚರಿಕೆ ನೀಡಿ ಚುನಾಗೆ ಈ ಗುಂಗಿನಿಂದ ಹೊರಗೆ ಬರಲು ಪ್ರಯತ್ನಿಸಿದ್ದಾರೆ.