ಭಾರತ ವಾಯುಪಡೆಯ ಅತ್ಯಾಧುನಿಕ ಹಗುರ ಹೆಲಿಕಾಫ್ಟರ್ ತಾಂತ್ರಿಕ ದೋಷದಿಂದ ನೀರಿನ ಮಧ್ಯದಲ್ಲೇ ಭೂ ಸ್ಪರ್ಶ ಮಾಡಿದ ಘಟನೆ ಬಿಹಾರದ ಮಜಾಫರ್ ಪುರ್ ನಲ್ಲಿ ನಡೆದಿದೆ.
ಪ್ರವಾಹ ಸಂತ್ರಸ್ತರಿಗೆ ಆಹಾರದ ಪ್ಯಾಕೇಟ್ ಗಳನ್ನು ಪೂರೈಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಫ್ಟರ್ ರೆಕ್ಕೆಗಳು ಮುರಿದಿದ್ದರಿಂದ ಅನಿವಾರ್ಯವಾಗಿ ನೀರಿನ ಮಧ್ಯೆದಲ್ಲೇ ಇಳಿದಿದೆ.
ಇಬ್ಬರು ಪೈಲೆಟ್ ಸೇರಿದಂತೆ ಮೂವರು ಹೆಲಿಕಾಫ್ಟರ್ ನಲ್ಲಿ ಇದ್ದರು. ಘಟನೆಯಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ದರ್ಬಾಂಗ ವಾಯುನೆಲೆಯಿಂದ ಹೊರಟ ಹೆಲಿಕಾಫ್ಟರ್ ಮುಜಾಫರ್ ಪುರದ ನಯ ಗೋಯೆನ್ ಬಳಿ ಪ್ರವಾಹ ನೀರಿನ ಮಧ್ಯೆ ಇಳಿಸಲಾಗಿದೆ.
ಹೆಲಿಕಾಫ್ಟರ್ ರೆಕ್ಕೆಗಳು ತುಂಡಾಗಿದ್ದರಿಂದ ಪೈಲೆಟ್ ಸಮಯಪ್ರಜ್ಞೆಯಿಂದ ತುರ್ತು ಭೂಸ್ಪರ್ಶ ಮಾಡಿದ್ದು, ಇದರಿಂದ ಭಾರೀ ದುರಂತವೊಂದು ತಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.