ಅತ್ಯಾಧುನಿಕ ವಂದೇ ಭಾರತ್ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದು ಹಳೆಯ ಮಾದರಿಯ ರೈಲು ಟೋ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲು ಇಂಜಿನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಉತ್ತರ ಪ್ರದೇಶದ ಎತ್ವಾ ಜಿಲ್ಲೆಯ ಭರತನಾ ಮತ್ತು ಸಾಹೋ ರೈಲ್ವೆ ನಿಲ್ದಾಣಗಳ ಮಧ್ಯೆ ಸೋಮವಾರ ಬೆಳಿಗ್ಗೆ 9.15ರ ಸುಮಾರಿಗೆ ಕೆಟ್ಟು ನಿಂತಿತು.
ರೈಲು ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಕೂಡಲೇ ವಂದೇ ಭಾರತ್ ರೈಲಿನ ತಾಂತ್ರಿಕ ವರ್ಗ ಕೂಡಲೇ ಸ್ಥಳಕ್ಕೆ ಆಗಮಿಸಿ ದುರಸ್ಥಿ ಮಾಡಲು ಯತ್ನಿಸಿದರೂ ಯಾವುದೇ ಫಲ ನೀಡಲಿಲ್ಲ. ಇದರಿಂದ ಅಧಿಕಾರಿಗಳು ದುರಸ್ಥಿಗೆ ಬಂದಿದ್ದ ರೈಲಿನ ಮೂಲಕ ಟೋ ಮಾಡಿ ಕಳುಹಿಸಿಕೊಟ್ಟರು.
ವಂದೇ ಭಾರತ್ ರೈಲು ವೇಗವಾಗಿ ಸಂಚರಿಸುವುದರಿಂದ ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳ ತಲುಪುವ ಉದ್ದೇಶದಿಂದ ಹೊರಟ್ಟಿದ್ದ ಪ್ರಯಾಣಿಕರು ವಂದೇ ಭಾರತ್ ರೈಲು ಕೆಟ್ಟು ನಿಂತಿದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಯಾಣಿಕರ ಆಕ್ರೋಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶತಾಬ್ಧಿ ಎಕ್ಸ್ ಪ್ರೆಸ್ ಮತ್ತು ಅಯೋಧ್ಯೆಗೆ ತೆರಳುತ್ತಿದ್ದ ಮತ್ತೊಂದು ವಂದೇ ಭಾರತ್ ರೈಲುಗಳ ಮೂಲಕ ಕಳುಹಿಸಿಕೊಟ್ಟರು.
ದೆಹಲಿ-ವಾರಣಾಸಿ ರೈಲಿನಲ್ಲಿ ಸುಮಾರು 750 ಪ್ರಯಾಣಿಕರು ಸಂಚರಿಸುತ್ತಿದ್ದರು. ಪ್ರಯಾಣಿಕರನ್ನು ಸುರಕ್ಷಿತವಾಗಿ ಮತ್ತೊಂದು ರೈಲಿನಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
आगे पुराना इंजन
पीछे #VandeBharatसिर्फ़ 30 सेकेंड का ये वीडियो @narendramodi के 10 साल का सच है
— Vinod Kapri (@vinodkapri) September 9, 2024