ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅತಿಶಿ ಸೋಮವಾರ ದೆಹಲಿ ಸಿಎಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಸೋಮವಾರ ಬೆಳಿಗ್ಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಅತಿಶಿ ಹಿಂದಿನ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆಸೀನರಾಗುತ್ತಿದ್ದ ಕುರ್ಚಿಯನ್ನು ಖಾಲಿ ಇರಿಸಿ ಅದರ ಪಕ್ಕದಲ್ಲಿ ಪ್ರತ್ಯೇಕ ಆಸನದಲ್ಲಿ ಕುಳಿತುಕೊಂಡರು.
ಸೋಮವಾರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, ನನ್ನ ಪರಿಸ್ಥಿತಿ ಶ್ರೀರಾಮ ವನವಾಸಕ್ಕೆ ಹೋದಾಗ ಭರತನ ಸ್ಥಿತಿ ಆಗಿದೆ. ಅರವಿಂದ್ ಕೇಜ್ರಿವಾಲ್ ಈ ಸಂಕಷ್ಟದಿಂದ ಹೊರಗೆ ಬರುವವರೆಗೂ ನಾನು ಈ ಹುದ್ದೆ ಅಲಂಕರಿಸಬೇಕಿದೆ. ನಾನು ರಾಮನ ಸ್ಥಾನದಲ್ಲಿ ಕೂತು ಭರತನ ಆಡಳಿತ ನಡೆಸಿದ ರೀತಿ ನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಮುಂದಿನ 4 ತಿಂಗಳ ನಂತರ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ರಾಜೀನಾಮೆ ನೀಡಿದ್ದು, 43 ವರ್ಷದ ಅದಿತಿ ಸಿಎಂ ಆಗಿ 4 ತಿಂಗಳ ಕಾಲ ಆಡಳಿತ ನಡೆಸಲಿದ್ದಾರೆ.