Thursday, November 21, 2024
Google search engine
Homeಕ್ರೀಡೆAsia cup WT20: ಏಷ್ಯಾಕಪ್ ಇತಿಹಾಸದಲ್ಲೇ ಗರಿಷ್ಠ ಮೊತ್ತದ ದಾಖಲೆ ಬರೆದ ಭಾರತ ವನಿತೆಯರು!

Asia cup WT20: ಏಷ್ಯಾಕಪ್ ಇತಿಹಾಸದಲ್ಲೇ ಗರಿಷ್ಠ ಮೊತ್ತದ ದಾಖಲೆ ಬರೆದ ಭಾರತ ವನಿತೆಯರು!

ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ 201 ರನ್ ಪೇರಿಸಿದ ಭಾರತ ವನಿತೆಯರ ತಂಡ ಏಷ್ಯಾಕಪ್ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿದ ದಾಖಲೆ ಬರೆದಿದೆ. ವಿಶೇಷ ಅಂದರೆ ಅತೀ ಹೆಚ್ಚು ರನ್ ಗಳಿಸಿದ ಮೊದಲ ಮೂರು ಸ್ಥಾನದಲ್ಲೂ ಭಾರತೀಯರೇ ಇದ್ದಾರೆ.

ಶ್ರೀಲಂಕಾದ ಡಂಬುಲ್ಲಾದಲ್ಲಿ ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಪೇರಿಸಿತು. ಇದು ಏಷ್ಯಾಕಪ್ ಇತಿಹಾಸದಲ್ಲೇ ತಂಡವೊಂದರ ಅತ್ಯಧಿಕ ಮೊತ್ತದ ದಾಖಲೆಯಾಗಿದೆ.

ಇದಕ್ಕೂ ಮುನ್ನ ಭಾರತ ತಂಡ 2022ರಲ್ಲಿ ಮಲೇಷ್ಯಾ ವಿರುದ್ಧ 4 ವಿಕೆಟ್ ಗೆ 181 ರನ್ ಗಳಿಸಿದ್ದರೆ, ಇದೇ ಯುಎಇ ವಿರುದ್ಧ 5 ವಿಕೆಟ್ ಗೆ 178 ರನ್ ಗಳಿಸಿತ್ತು.

ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 66 ರನ್ ಗಳಿಸಿದರೆ, ರಿಚಾ ಘೋಷ್ 29 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 64 ರನ್ ಸಿಡಿಸಿ ಔಟಾಗದೇ ಉಳಿದರು. ಇವರಿಬ್ಬರು 5ನೇ ವಿಕೆಟ್ ಗೆ 75 ರನ್ ಪೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments