ಪತಂಜಲಿಯ 14 ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಲಾಗಿದ್ದು, ಅವುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ಸೂಚಿಸಲಾಗಿದೆ ಎಂದು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೆದಿಕ್ ಪ್ರವೇಟ್ ಲಿಮಿಟೆಡ್ ಸುಪ್ರೀಂಕೋರ್ಟ್ ಗೆ ಅಫಿದಾವಿತ್ ಸಲ್ಲಿಸಿದೆ.
ಆಧುನಿಕ ವೈದ್ಯ ಪದ್ಧತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಮ್ ದೇವ್ ಅವರ ಉತ್ಪನ್ನಗಳ ಗುಣಮಟ್ಟ ಪ್ರಶ್ನಿಸಿ ವೈದ್ಯರು ಸಲ್ಲಿಸಿದ್ದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಜನರಿಗೆ ತಪ್ಪು ಸಂದೇಶ ನೀಡಿದ ಬಾಬಾ ರಾಮ್ ದೇವ್ ಮತ್ತು ಸಿಇಒ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಸುಪ್ರೀಂಕೋರ್ಟ್ ಒತ್ತಡಕ್ಕೆ ಮಣಿದ ಬಾಬಾ ರಾಮ್ ದೇವ್ ದೇಶದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಬೇಷರತ್ ಕ್ಷಮೆ ಕೋರಿತ್ತು. ಇದೇ ವೇಳೆ ಉತ್ತರಾಖಂಡ್ ರಾಜ್ಯ ಸರ್ಕಾರ ಪತಂಜಲಿ 14 ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿತ್ತು. ನಂತರ ನಿಷೇಧವನ್ನು ವಾಪಸ್ ಪಡೆದಿತ್ತು. ನಂತರ ಮೇ 17ರಂದು ನಿಷೇಧ ಆದೇಶಕ್ಕೆ ತಡೆ ನೀಡಿತ್ತು.
ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಏಪ್ರಿಲ್ 15ರಂದು ಉತ್ತರಾಖಂಡ್ ನಿಷೇಧದ ಹಿನ್ನೆಲೆಯಲ್ಲಿ 14 ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಿದ್ದಾಗಿ ಪತಂಜಲಿ ಸಂಸ್ಥೆ ಮೇ 16ರಂದು ಸಲ್ಲಿಸಿದ್ದ ಅಫಿದಾವಿತ್ ಅನ್ನು ಪರಿಗಣಿಸಿದೆ.
ಮಾರಾಟ ಸ್ಥಗಿತಗೊಳಿಸಲಾದ 14 ಉತ್ಪನ್ನಗಳ ಜಾಹಿರಾತುಗಳನ್ನು ಕೂಡ ವಾಪಸ್ ಪಡೆಯಲಾಗಿದೆ ಎಂದು ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಲಾಗಿದೆ.
ಉತ್ತರಾಖಂಡದ ಔಷಧ ನಿಯಂತ್ರಕವು ಅಮಾನತುಗೊಳಿಸಿರುವ ತನ್ನ 14 ಉತ್ಪನ್ನಗಳ ಮಾರಾಟವನ್ನು ಸಹ ನಿಲ್ಲಿಸಿರುವುದಾಗಿ ಪತಂಜಲಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಲಿಖಿತವಾಗಿ ತಿಳಿಸಿದೆ. ಈ ಉತ್ಪನ್ನಗಳಲ್ಲಿ ಅಸ್ತಮಾ, ಬ್ರಾಂಕೈಟಿಸ್ ಮತ್ತು ಮಧುಮೇಹಕ್ಕೆ ರಾಮದೇವ್ ಅವರ ಸಾಂಪ್ರದಾಯಿಕ ಔಷಧಿಗಳೂ ಸೇರಿವೆ.
ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ನಿಷೇಧಿಸಿರುವ ದಿವ್ಯ ಫಾರ್ಮಸಿಯ ಔಷಧಿಗಳಲ್ಲಿ ಶ್ವಾಸರಿ ಗೋಲ್ಡ್, ಶ್ವಾಸರಿ ವಟಿ, ಬ್ರಾಂಕೋಮ್, ಶ್ವಾಸರಿ ಪ್ರವಾಹಿ, ಶ್ವಾಸರಿ ಅವಲೇಹ, ಮುಕ್ತ ವತಿ ಎಕ್ಸ್‌ಟ್ರಾ ಪವರ್, ಲಿಪಿಡೋಮ್, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುಗ್ರಿಟ್. ವತಿ ಹೆಚ್ಚುವರಿ ಶಕ್ತಿ ಮತ್ತು ಪತಂಜಲಿ ದೃಷ್ಟಿ ಐ ಡ್ರಾಪ್ ಸಹ ಸೇರಿದೆ.