ಬಾಂಗ್ಲಾದೇಶ ಸಂಸದ ಅನ್ವರುಲ್ ಅಜಿಮ್ ಕೊಲೆ ಮಾಡಲು 5 ಕೋಟಿ ರೂ. ಸುಪಾರಿ ನೀಡಿದ್ದೂ ಅಲ್ಲದೇ ಹನಿಟ್ರ್ಯಾಪ್ ಮಾಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮೇ 12ರಂದು ಚಿಕಿತ್ಸೆಗಾಗಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾಗೆ ಆಗಮಿಸಿದ್ದ ಅನ್ವರುಲ್ ಅಜಿಮ್ ಸ್ನೇಹಿತ ಗೋಪಾಲ್ ಬಿಸ್ವಾಲ್ ಜೊತೆ ತಂಗಿದ್ದರು. ನಂತರ ನಾಪತ್ತೆಯಾದ ಅವರು ಕೊನೆಯ ಬಾರಿ ಕಾಣಿಸಿಕೊಂಡಿದ್ದು ಕೋಲ್ಕತಾದ ಹೊರವಲಯದ ಅಪಾರ್ಟ್ ಮೆಂಟ್ ನಲ್ಲಿ.
ಅಪಾರ್ಟ್ ಮೆಂಟ್ ನಲ್ಲಿ ಭೀಕರವಾಗಿ ಕೊಲೆಯಾದ ಅನ್ವರುಲ್ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತುಂಬಿ ನಗರದ ವಿವಿಧ ಬಡಾವಣೆಗಳಲ್ಲಿ ಶವದ ತುಂಡುಗಳನ್ನು ಬಿಸಾಡಲಾಗಿತ್ತು.
ತನಿಖೆ ನಡೆಸುತ್ತಿರುವ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು, ಹನಿ ಟ್ರ್ಯಾಪ್ ಮೂಲಕ ಸಂಸದನನ್ನು ನಗರದ ಹೊರವಲಯದ ಅಪಾರ್ಟ್ ಮೆಂಟ್ ಗೆ ಕರೆಸಿಕೊಳ್ಳಲಾಗಿದ್ದು, ನಂತರ ಪ್ರಾಣಿಗಳನ್ನು ಹತ್ಯೆ ಮಾಡುವ ಕೆಲಸ ಮಾಡುವ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದು ಮುಂಬೈನಲ್ಲಿ ವಾಸವಾಗಿದ್ದ ವ್ಯಕ್ತಿಯಿಂದ ಕೊಲೆ ಮಾಡಿಸಿ ದೇಹವನ್ನು ಕತ್ತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಹನಿಟ್ರ್ಯಾಪ್ ಮಾಡಿದ ಮಹಿಳೆಯನ್ನು ಬಾಂಗ್ಲಾದೇಶದ ಢಾಕಾದಲ್ಲಿ ಬಂಧಿಸಲಾಗಿದೆ. ಹನಿಟ್ರ್ಯಾಪ್ ಮಾಡಿದ್ದ ಶೈಲಂತಿ ರೆಹಮಾನ್ ಎಂಬಾಕೆಯನ್ನು ಬಂಧಿಸಲಾಗಿದ್ದು, ಅನ್ವರುಲ್ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾದ ಅವಾಮಿ ಲೀಗ್ ಸಂಸದನ ಸ್ನೇಹಿತ ಅಕ್ತರುಜಾಮ್ ಅವರ ಗೆಳತಿ ಎಂದು ಗುರುತಿಸಲಾಗಿದೆ.
ಅಕ್ತರುಜಾಮ್ ಅಮೆರಿಕ ನಿವಾಸಿಯಾಗಿದ್ದು, ಈತ ಭಾರತದೊಳಗೆ ಅಕ್ರಮವಾಗಿ ವಲಸೆ ಹೋಗಿರುವ ವ್ಯಕ್ತಿಯನ್ನು ಕೊಲೆ ಮಾಡಲು 5 ಕೋಟಿ ರೂ. ಸುಪಾರಿ ನೀಡಲಾಗಿದ್ದು, ಹನಿಟ್ರ್ಯಾಪ್ ಮೂಲಕ ತಮಗೆ ಬೇಕಾದ ಜಾಗತಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಅನ್ವರುಲ್ ಅವರನ್ನು ಅಕ್ರಮ ವಲಸಿಗ ಭೀಕರವಾಗಿ ಕೊಲೆಗೈದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೋಲ್ಕತಾದ ವಿವಿದೆಡೆ ಬಿಸಾಡಿದ್ದ. ತನಿಖೆ ನಡೆಸಿದ ಸಿಐಡಿ ಅನ್ವರುಲ್ ಅಜಿಮ್ ಅವರನ್ನು ಅಕ್ರಮ ವಲಸಿಗನನ್ನು ಬಂಧಿಸಿದ್ದಾರೆ. ಈತ ಅನ್ವರುಲ್ ಅವರನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ವಿವಿದೆಡೆ ಬಿಸಾಡಿದ್ದ ಎಂದು ತಿಳಿಸಿದೆ.
ಪ್ರಾಣಿಗಳನ್ನು ಕತ್ತರಿಸುವ ಕಟುಕನ ಕೆಲಸ ಮಾಡುತ್ತಿದ್ದ ಜಿಹಾದ್ ಹವಾಲ್ದಾರ್ ಅನ್ವರುಲ್ ಅವರನ್ನು ಹತ್ಯೆ ಮಾಡಿದ್ದು, ಈತ ಬಾಂಗ್ಲಾದೇಶದ ಖುಲಾನಾ ಜಿಲ್ಲೆಯ ಬಾರಖ್ ಪುರ್ ನಿವಾಸಿಯಾಗಿದ್ದು, ಅಕ್ರಮವಾಗಿ ಭಾರತದೊಳಗೆ ನುಸುಳಿ ಮುಂಬೈನಲ್ಲಿ ವಾಸವಾಗಿದ್ದ.
ಹವಾಲ್ದಾರ್ ನನ್ನು ಅವಾಮಿ ಲೀಗ್ ಸಂಸದ ಸ್ನೇಹಿತ ಕೆಲಸಕ್ಕೆ ಇಟ್ಟುಕೊಂಡಿದ್ದು, ಈತ ಅಮೆರಿಕದ ನಿವಾಸಿಯಾಗಿದ್ದಾನೆ. ಈತ ಎರಡು ತಿಂಗಳ ಹಿಂದೆಯಷ್ಟೇ ಕೋಲ್ಕತಾಗೆ ಭೇಟಿ ನೀಡಿದ್ದ ಎಂದು ಸಿಐಡಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.