Thursday, November 21, 2024
Google search engine
Homeಕ್ರೀಡೆಪಂದ್ಯದ ನಡುವೆ ಪಾರ್ಶ್ವವಾಯು ಬಡಿದು ಬಾಂಗ್ಲಾದೇಶದ ಶ್ರೇಷ್ಠ ಚೆಸ್ ಪಟು ಸಾವು

ಪಂದ್ಯದ ನಡುವೆ ಪಾರ್ಶ್ವವಾಯು ಬಡಿದು ಬಾಂಗ್ಲಾದೇಶದ ಶ್ರೇಷ್ಠ ಚೆಸ್ ಪಟು ಸಾವು

ಬಾಂಗ್ಲಾದೇಶದ ಅಗ್ರ ಶ್ರೇಯಾಂಕಿತ ಚೆಸ್ ಪಟು ಹಾಗೂ ಗ್ರ್ಯಾಂಡ್ ಮಾಸ್ಟರ್ ಜ್ಯುಯೆರ್ ರೆಹಮಾನ್ ಪಂದ್ಯದ ನಡುವೆಯೇ ಮೃತಪಟ್ಟಿದ್ದಾರೆ.

ಶುಕ್ರವಾರ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಂದ್ಯದ ವೇಳೆ 50 ವರ್ಷದ ಜ್ಯುಯೆರ್ ರೆಹಮಾನ್ ಪಾರ್ಶ್ವವಾಯುಗೆ ಒಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬಾಂಗ್ಲಾದೇಶ ಚೆಸ್ ಫೆಡರೇಷನ್ ಕಾರ್ಯದರ್ಶಿ ಶಹಬಾದ್ ಉದ್ದೀನ್ ಶಮೀಮ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಗ್ರ್ಯಾಂಡ್ ಮಾಸ್ಟರ್ ಇನಾಮುಲ್ ಹುಸೇನ್ ವಿರುದ್ಧದ ಟೂರ್ನಿಯ 12ನೇ ಸುತ್ತಿನ ಪಂದ್ಯದ ವೇಳೆ ಜ್ಯುಯೆರ್ ರೆಹಮಾನ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಪಂದ್ಯದ ನಡುವೆ ಕುಸಿದುಬಿದ್ದ ಜ್ಯಯೆರ್ ರೆಹಮಾನ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಂದ್ಯದ ವೇಳೆ ಅವರು ಅಸ್ವಸ್ಥಗೊಂಡಿರುವ ಯಾವುದೇ ಸೂಚನೆ ಇರಲಿಲ್ಲ. ನಾನು ಕಾಯಿ ಮುನ್ನಡೆಸಿದ ನಂತರ ಅವರ ನಡೆಗೆ ಕಾಯುತ್ತಿದ್ದೆ. ಈ ವೇಳೆ ಅವರು ಕುಸಿದುಬಿದ್ದರು. ನಾನು ನೀರು ತೆಗೆದುಕೊಳ್ಳಲು ಬಗ್ಗುತ್ತಿದ್ದಾರೆ ಎಂದು ಭಾವಿಸಿದೆ ಎಂದು ಎದುರಾಳಿ ಆಟಗಾರ ಉದ್ದೀನ್ ಶಮೀಮ್ ಘಟನೆಯನ್ನು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments