ಪ್ಲಾಸ್ಟಿಕ್ ಅಕ್ಕಿ, ರಾಯನಿಕ ಬಳಸಿದ ತರಕಾರಿ, ಬಣ್ಣ ಬಳ್ಳಿದ ಹಣ್ಣು… ಹೀಗೆ ಕೃತಕ ಆಹಾರ ಪದಾರ್ಥಗಳು ಮಾರುಕಟ್ಟೆಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ಕೃತಕ ಬೆಳ್ಳುಳ್ಳಿ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಸೀಮೆಂಟ್ ಬಳಸಿ ತಯಾರಿಸಿದ ಬೆಳ್ಳುಳ್ಳಿ ಮಹಾರಾಷ್ಟ್ರದ ಅಲೋಕಾ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಬೆಳ್ಳುಳ್ಳಿಯನ್ನು ಬಿಡಿಸಿದ್ದು, ಅದರ ತೊಳೆ ಬಿಡಿಸಿದಾಗ ಕಲ್ಲಿಗಿಂತ ಗಟ್ಟಿಯಾಗಿದೆ. ಪರಿಶೀಲಿಸಿದಾಗ ಅದು ಸೀಮೆಂಟ್ ನಿಂದ ಮಾಡಿದ್ದು ಎಂದು ತಿಳಿದು ಬಂದಿದೆ.
ತರಕಾರಿ ಮಾರುಕಟ್ಟೆಗೆ ಸೀಮೆಂಟ್ ಬೆಳ್ಳುಳ್ಳಿ ಕಾಲಿಟ್ಟಿದ್ದು, ರೈತರು ಮಾತ್ರವಲ್ಲ ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವ ಪ್ರತಿಯೊಬ್ಬರು ಆತಂಕಗೊಂಡಿದ್ದಾರೆ.