ಪ್ರೀತಿಸಿದ ಯುವಕನಿಂದ ಮೋಸ ಹೋಗಿದ್ದರಿಂದ ನೊಂದ ಯುವತಿ ಕ್ಷಮಿಸಿಬಿಡು ಅಮ್ಮ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದ ನಿವಾಸಿ ವರ್ಷಿಣಿ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಯುವತಿ ಡೆತ್ ನೋಟ್ ಬರೆದಿಟ್ಟು, ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆತ ಮದುವೆಗೆ ನಿರಾಕರಿಸಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ಆಕೆಯ ಪ್ರೇಮಿ ವಿರುದ್ಧ ಮೊದಲಿಗೆ ಸಾಲು ಸಾಲು ಆರೋಪವನ್ನು ಮಾಡಿರುವ ವರ್ಷಿಣಿ, ಇಂತಹ ಯುವಕರನ್ನು ನಂಬಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಆಕೆಯ ತಾಯಿ ಮತ್ತು ಅಧ್ಯಾಪಕರ ಬಳಿ ಕ್ಷಮೆಯಾಚಿಸಿದ್ದಾರೆ. ನʻನ್ನ ಸಾವಿಗೆ ಅಭಿದೇವರದೊಡ್ಡಿಯೇ ಕಾರಣ ಅಮ್ಮ ಸಾಧ್ಯ ಆದ್ರೆ ನನ್ನನ್ನು ಕ್ಷಮಿಸು. ಅಭಿ ನನ್ನನ್ನು ನಂಬಿಸಿ ಬ್ಲ್ಯಾಕ್‌ಮೇಲ್ ಮಾಡಿ ನನ್ನ ಉಂಗುರ, ಹಣ ಎಲ್ಲವನ್ನು ಪಡೆದಿದ್ದಾನೆ. ನನ್ನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದ. ಲೈಂಗಿಕವಾಗಿ ಸಹಕರಿಸಿದರೆ ಮಾತ್ರ ಫೋಟೋ ಡಿಲೀಟ್‌ಮಾಡುತ್ತೇನೆ ಎನ್ನುತ್ತಿದ್ದ. ಹಾಗಾಗಿ ಭಯವಾಗಿ ಅವನ ಜೊತೆ ಇದ್ದೆ. ಪ್ರೀತಿಹೆಸರಲ್ಲಿ ನನಗೆ ಮೋಸ ಮಾಡಿದ್ದಾನೆ. ನಾನು ಗರ್ಭಿಣಿಯಾದ ನಂತರ ಆ ವಿಚಾರ ತಿಳಿದು ಗರ್ಭಪಾತ ಮಾಡಿಸಿದ್ದಾನೆʼ
ʻಅಮ್ಮ ಕ್ಷಮಿಸು ನನಗೆ ಗೊತ್ತು ನಿನ್ನ ನಂಬಿಕೆಗೆ ನಾನು ಮೋಸ ಮಾಡಿಬಿಟ್ಟಿದ್ದೇನೆ. ಸಾಯೋಕು ಭಯ ಆಗುತ್ತಿದೆ. ಆದರೆ ಏನು ಮಾಡಲಿ ನನಗೆ ಬೇರೆ ದಾರಿಯೇ ಇಲ್ಲ. ನಾನು ಅಭಿಯನ್ನು ನಂಬಬಾರದಿತ್ತು. ನಂಬಿ ಮೋಸ ಹೋದೆ. ಅದೊಂದು ತಪ್ಪು ಮಾಡಿ ನನ್ನ ಜೀವನ ಎಲ್ಲಿಗೆ ತಂದುಕೊಂಡಿದ್ದೇನೆ ನೋಡಿ. ನೀವು ಆತನನ್ನು ಸುಮ್ಮನೆ ಬಿಡಬೇಡಿ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿʼ ಎಂದು ವರ್ಷಿಣಿ ತನ್ನ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


