Friday, February 13, 2026
Google search engine
Homeಬೆಂಗಳೂರುಬೆಂಗಳೂರಿನ ರೇಸ್ ಕೋರ್ಸ್ ಸ್ಥಳಾಂತರ: ಬಹುದಿನಗಳ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು

ಬೆಂಗಳೂರಿನ ರೇಸ್ ಕೋರ್ಸ್ ಸ್ಥಳಾಂತರ: ಬಹುದಿನಗಳ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು

ದಶಕಗಳಿಂದ ಕೇಳಿಬರುತ್ತಿದ್ದ ಬೆಂಗಳೂರಿನ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ಸ್ಥಳಾಂತರಕ್ಕೆ ಕೊನೆಗೂ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ಅನ್ನು ಕುಣಿಗಲ್ ಗೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ.

ರೇಸ್ ಕೋರ್ಸ್ ಕ್ಲಬ್ ಲೀಸ್ ಅವಧಿ ಮುಕ್ತಾಯಗೊಂಡಿದ್ದು, ಬಾಡಿಗೆ ಕೂಡ ಪರಿಷ್ಕರಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ಅನ್ನು ಕುಣಿಗಲ್ ನ ಸ್ಟಫ್ ಕೋರ್ಸ್ ಗೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು.

ರೇಸ್ ಕೋರ್ಸ್ ರಸ್ತೆ ಸ್ಥಳಾಂತರಗೊಂಡ ನಂತರವೂ ಖಾಲಿ ಜಾಗ ಉಳಿಸಿಕೊಂಡು ಹೋಗಲು ನಿರ್ಧರಿಸಲಾಯಿತು.

ಎಸ್.ಎಂ.ಕೃಷ್ಣ ಕಾಲದಿಂದಲೂ ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ಸ್ಥಳಾಂತರಿಸಲು ಒತ್ತಡಗಳು ಕೇಳಿ ಬಂದಿದ್ದವು. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಳ ಹಾಗೂ ಪರಿಸರ ಮಾಲಿನ್ಯ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ಸ್ಥಳಾಂತರಕ್ಕೆ ಒತ್ತಡ ಕೇಳಿ ಬಂದಿತ್ತು.  ಆದರೆ ಶ್ರೀಮಂತರ ಲಾಬಿ ಹಿನ್ನೆಲೆಯಲ್ಲಿ ಸ್ಥಳಾಂತರಕ್ಕೆ ಸರ್ಕಾರ ಹಿಂದೇಟು ಹಾಕುತ್ತಾ ಬಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments