ಬೆಂಗಳೂರು: ದಿಟ್ಟ ಶಕ್ತಿ ಹಾಗೂ ಸಮೃದ್ಧ ಕ್ರಿಕೆಟ್ ಪರಂಪರೆಯೊಂದಿಗೆ ದೀರ್ಘಕಾಲದ ಸಹಯೋಗ ಏರ್ಪಡಿಸಿಕೊಂಡಿರುವ ಬ್ರ್ಯಾಂಡ್ ಆದ ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ತನ್ನ ಡಿಜಿಟಲ್-ಮೊದಲು ಆಸ್ತಿಯಾದ ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಗೇಮ್ ನೈಟ್ಸ್ ಅನ್ನು ಬೆಂಗಳೂರಿಗೆ ತಂದಿದೆ.
ಅಶೋಕನಗರದಲ್ಲಿರುವ ಆರ್‌ಸಿವಿ ಬಾರ್ ಮತ್ತು ಕೆಫೇಯಲ್ಲಿ ನಡೆದ ಕಾರ್ಯಕ್ರಮವು, ಈ ಪ್ರದೇಶವನ್ನು ಸ್ಪರ್ಧೆ, ಸೃಜನಶೀಲತೆ ಹಾಗೂ ಮುಂದಿನ ಪೀಳಿಗೆ ಮನರಂಜನೆಯ ಭರ್ಜರಿ ವಲಯವನ್ನಾಗಿ ಪರಿವರ್ತಿಸಿ ಅನುಭವಗಳ ರಾಷ್ಟ್ರವ್ಯಾಪಿ ಸರಣಿಗಾಗಿ ವೇದಿಕೆ ಕಲ್ಪಿಸಿತ್ತು.
ಕ್ರೀಡೆ ಹಾಗೂ ಯುವ ಅಭಿವ್ಯಕ್ತಿಯ ಮಧ್ಯದಲ್ಲಿ ಸದಾ ಇರಲು ಬಯಸುವ ಬ್ರ್ಯಾಂಡ್ ಆಗಿ ವರ್ಚುವಲ್ ಕ್ಷೇತ್ರಗಳಿಗೆ ಇದರ ಪ್ರವೇಶವು ಸಹಜ ವಿಕಸನವೇ ಆಗಿದೆ. ಯಾವ ರೀತಿ ಕ್ರಿಕೆಟ್ ಪೀಳಿಗೆಪೀಳಿಗೆಗಳನ್ನು ಸೆರೆಹಿಡಿದಿಟ್ಟಿದೆಯೋ ಅದೇ ರೀತಿ ಪರಸ್ಪರ ಸಂವಾದ ಆಟವೂ ಕೂಡ ಈಗ ಉತ್ಕಂಟತೆ, ಕಾರ್ಯಕ್ಷಮತೆ ಹಾಗೂ ಸಾಂಸ್ಕೃತಿಕ ಸಂಬಂಧದ ಹೊಸ ಗಡಿಯಾಗಿ ವಿಕಸನಗೊಳ್ಳುತ್ತಿದೆ. ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಸಮುದಾಯ, ಸ್ಪರ್ಧೆ ಮತ್ತು ಸೃಜನಶೀಲತೆಯು ಒಗ್ಗೂಡುವಂತಹ ಪ್ರದೇಶಗಳನ್ನು ಸೃಷ್ಟಿಸುವ ಮೂಲಕ ಈ ಜಗತ್ತುಗಳೊಳಗಿನ ಅಂತರಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಗೇಮ್ ನೈಟ್ಸ್ ಕಾರ್ಯಕ್ರಮವು, ಅಭಿಮಾನಿಗಳು, ಸೃಷ್ಟಿಕರ್ತರು ಹಾಗೂ ಡಿಜಿಟಲ್ ಅಥ್ಲೀಟ್‌ಗಳನ್ನು ಒಗ್ಗೂಡಿಸಿ, ವಿದ್ಯುತ್ತಿನಂತಹ ಶಕ್ತಿಯುಳ್ಳ ಸಂಜೆಯನ್ನು ಸೃಷ್ಟಿಸಿತ್ತು. ಇದರ ಮುಖ್ಯಾಂಶಗಳು ಅತ್ಯಾಧುನಿಕ ವಿಆರ್ ಕ್ರಿಕೆಟ್, ಕ್ರಿಕೆಟ್-ಥೀಮ್ ಇರುವ ಶೀರ್ಷಿಕೆಯುಳ್ಳ ಪ್ಲೇಸ್ಟೇಶನ್ ಗೇಮಿಂಗ್ ವಲಯಗಳು, ಮತ್ತು ಕೌತುಕಮಯವಾದ ಬಹುಮಾನಗಳಿರುವ ಪರಸ್ಪರ ಸಂವಾದ ಸವಾಲುಗಳನ್ನು ಒಳಗೊಂಡಿತ್ತು. ಅತಿಥಿಗಳು, ಒಂದೇ ಸೂರಿನಡಿ, ಸಾಂಪ್ರದಾಯಿಕ ಅಭಿಮಾನಿತನವನ್ನು ಆಧುನಿಕ ಆಟದೊಡನೆ ಮಿಶ್ರಣ ಮಾಡಿದ ಮಾರ್ಕೀ ಲೀಗ್ ಪಂದ್ಯದ ನೇರ ಸ್ಕ್ರೀನಿಂಗ್‌ಅನ್ನು ಕೂಡ ಆನಂದಿಸಿದರು.
“ಗೇಮಿಂಗ್, ರಾಯಲ್ ಚಾಲೆಂಜ್‍ಗಾಗಿ ಒಂದು ಜೈವಿಕ ವಿಸ್ತರಣೆಯಾಗಿದೆ-ಇದು, ಉನ್ನತ ಶಕ್ತಿಯಿರುವ ಕ್ರೀಡೆ ಹಾಗೂ ದಿಟ್ಟವಾದ ಸ್ವ ಅಭಿವ್ಯಕ್ತಿಯ ಮಧ್ಯಂತರದಲ್ಲಿ ಸದಾ ನಿಂತಿರುವ ಬ್ರ್ಯಾಂಡ್ ಆಗಿದೆ.” ಎಂದು ಹೇಳಿದ ಡಿಯಾಜಿಯೋದ ಉಪಾಧ್ಯಕ್ಷ ಮತ್ತು ಪೋರ್ಟ್‌ಫೋಲಿಯೋ ಮುಖ್ಯಸ್ಥ ವರುಣ್ ಕೂರಿಚ್ಚ್, “ಅನೇಕ ವರ್ಷಗಳ ಕಾಲ ಕ್ರಿಕೆಟ್‌ನಲ್ಲೇ ಬೇರೂರಿದ ಬಳಿಕ, ಡಿಜಿಟಲ್ ಕ್ಷೇತ್ರದೊಳಕ್ಕೆ ಕಾಲಿಡುತ್ತಿರುವುದು ನಮಗೆ ತತ್ಕಾಲೀನ, ತಲ್ಲೀನ ಫಾರ್ಮಾಟ್‌ನಲ್ಲಿ ಅದೇ ಸ್ಪರ್ಧಾತ್ಮಕ ಚೈತನ್ಯವನ್ನು ಕ್ರಮಗೊಳಿಸುವುದಕ್ಕೆ ಅವಕಾಶ ಒದಗಿಸಿದೆ. ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಗೇಮ್ ನೈಟ್ಸ್ ಮೂಲಕ ನಾವು ಗೇಮ್‌ನ ಥ್ರಿಲ್‌ಅನ್ನು ಆಚರಿಸಲು ಆಟಗಾರರನ್ನು ಒಟ್ಟಿಗೆ ತಂದು ಯಾವಾಗಲೂ ದಿಟ್ಟವಾದುದನ್ನೇ ಆಯ್ಕೆ ಮಾಡಿಕೊಳ್ಳುವಂತಹ ಒಂದು ದಿಟ್ಟ ವೇದಿಕೆಯನ್ನು ನಿರ್ಮಾಣ ಮಾಡುತ್ತಿದ್ದೇವೆ.” ಎಂದು ಹೇಳಿದರು.
ಮುಂಬೈ, ಲೂಧಿಯಾನ ಹಾಗೂ ಬೆಂಗಳೂರಿನ ಬಳಿಕ ರಾಯಲ್ ಚಾಲೆಂಜ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಗ ನೈಟ್ಸ್, ಗೌಹಾತಿ ಮತ್ತು ಅದರಾಚೆ ನಡೆದು, ಭಾರತದ ಬೆಳೆಯುತ್ತಿರುವ ಗೇಮಿಂಗ್ ಚಿತ್ರಣವನ್ನು ಶೋಧಿಸಿ, ದೇಶಾದ್ಯಂತ ಇರುವ ಉತ್ಕಂಟ ಯುವ ಸಮುದಾಯಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವ ಸಾಧ್ಯತೆಯನ್ನು ಶೋಧಿಸಲಿದೆ. ಈ ಹೊಸ ಅಧ್ಯಾಯವು, ತನ್ನ ಪ್ರೇಕ್ಷಕರೊಡನೆ ಬೆಳೆದು, ದಿಟ್ಟ ಆಯ್ಕೆಗಳನ್ನು ಪ್ರೋತ್ಸಾಹಿಸಿ ಮತ್ತು ಆಧುನಿಕ ಕ್ರೀಡೆಯ ಸದಾ ವಿಸ್ತಾರಗೊಳ್ಳುತಿರುವ ಚೈತನ್ಯವನ್ನು ಆಚರಿಸಬೇಕೆನ್ನುವ ರಾಯಲ್ ಚಾಲೆಂಜ್‌ನ ಬದ್ಧತೆಯನ್ನು ಮರುಖಾತರಿಪಡಿಸುತ್ತದೆ.
ಡಿಯಾಜಿಯೊ ಇಂಡಿಯಾ (Diageo India)
ಡಿಯಾಜಿಯೊ ಇಂಡಿಯಾ ದೇಶದ ಮುಂಚೂಣಿ ಪಾನೀಯ ಮದ್ಯ ತಯಾರಿಕಾ ಸಂಸ್ಥೆಯಾಗಿದ್ದು, ಜಾಗತಿಕ ಮುಂದಾಳು ಸಂಸ್ಥೆಯಾದ ಡಿಯಾಜಿಯೊ Plc ದ ಅಧೀನ ಸಂಸ್ಥೆಯಾಗಿದೆ. ಸಂಸ್ಥೆಯು, ಜಾನ್ನೀ ವಾಕರ್, ಬ್ಲ್ಯಾಕ್ ಡಾಗ್, ಬ್ಲ್ಯಾಕ್ ಅಂಡ್ ವೈಟ್, VAT 69, ಆಂಟಿಕ್ವಿಟಿ, ಸಿಗ್ನೇಚರ್, ದಿ ಸಿಂಗಲ್‌ಟನ್, ರಾಯಲ್ ಚಾಲೆಂಜ್, ಮ್ಯಾಕ್‌ಡೊವೆಲ್ಸ್ ನಂ. 1, ಸ್ಮಿರ್ನಾಫ್, ಕೆಟೆಲ್ ಒನ್, ಟಾಂಖೆರೆ, ಕ್ಯಾಪ್ಟನ್ ಮಾರ್ಗನ್, ಮತ್ತು ಭಾರತದ ಆರ್ಟಿಸನಾಲ್ ಸಿಂಗಲ್ ಮಾಲ್ಟ್ ವ್ಹಿಸ್ಕಿ ಆದ ಗೊಡಾವಾನ್ ಮುಂತಾದ ಪ್ರೀಮಿಯಮ್ ಅದ್ಬುತ ಬ್ರ್ಯಾಂಡ್‌ಗಳನ್ನು ಉತ್ಪಾದಿಸಿ, ಮಾರಾಟ ಮಾಡಿ, ವಿತರಿಸುತ್ತದೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನಾವು ವಿಶಾಲ ಹೆಜ್ಜೆಗುರುತು ಹೊಂದಿದ್ದು, 3000ಕ್ಕಿಂತ ಹೆಚ್ಚಿನ ಉದ್ಯೋಗಿಗಳು, ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇರುವ 35 ಉತ್ಪಾದನಾ ಘಟಕಗಳು, ಪ್ರಬಲವಾದ ವಿತರಣಾ ಕಾರ್ಯಜಾಲ ಹಾಗೂ ಅತ್ಯಾಧುನಿಕ ತಾಂತ್ರಿಕ ಕೇಂದ್ರದ ನಿಬದ್ಧ ತಂಡದ ಬೆಂಬಲ ಹೊಂದಿದ್ದೇವೆ. ಭಾರತದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್(United Spirits Limited (USL) ಆಗಿ ಸ್ಥಾಪನೆಯಾಗಿರುವ ಸಂಸ್ಥೆಯು ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (BSE) ಪಟ್ಟಿ ಮಾಡಲ್ಪಟ್ಟಿದೆ.


