Thursday, December 25, 2025
Google search engine
Homeಕಾನೂನುಬೆಂಗಳೂರಿನಲ್ಲಿ ಟೆಕ್ಕಿ ಸುಭಾಷ್ ಆತ್ಮಹತ್ಯೆ ಪ್ರಕರಣ: ತಾಯಿ ಸುಪರ್ದಿಗೆ ಮಗು ವಹಿಸಿದ ಸುಪ್ರೀಂ

ಬೆಂಗಳೂರಿನಲ್ಲಿ ಟೆಕ್ಕಿ ಸುಭಾಷ್ ಆತ್ಮಹತ್ಯೆ ಪ್ರಕರಣ: ತಾಯಿ ಸುಪರ್ದಿಗೆ ಮಗು ವಹಿಸಿದ ಸುಪ್ರೀಂ

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್ ವೇರ್ ಇಂಜಿನಿಯರ್ ಅತುಲ್ ಸುಭಾಷ್ ಅವರ 4 ವರ್ಷದ ಮಗುವನ್ನು ತಾಯಿ ಸುಪರ್ದಿಗೆ ಸುಪ್ರೀಂಕೋರ್ಟ್ ವಹಿಸಿದೆ.

ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ವೀಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉತ್ತರ ಪ್ರದೇಶ ಮೂಲದ ಟೆಕ್ಕಿ ಅನುಲ್ ಸುಭಾಷ್ ವರದಕ್ಷಿಣೆ ಕಿರುಕುಳ ನೀಡಿದ ಪತ್ನಿ ಹಾಗೂ ಅವರ ಕುಟುಂಬದ ವಿರುದ್ಧ ಆರೋಪ ಹೊರಿಸಿದ್ದರು.

ಬೆಂಗಳೂರು ಪೊಲೀಸರು ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಸುಭಾಷ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಬಂಧಿಸಿತ್ತು. ಈ ವೇಳೆ 4 ವರ್ಷದ ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಅತುಲ್ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಬಿವಿ ನಾಗರತ್ನ ಹಾಗೂ ನ್ಯಾಯಮೂರ್ತಿ ಎಸ್.ಸಿ. ಶರಮ ಅವರನನೊಳಗೊಂಡ ವಿಭಾಗೀಯ ಪೀಠ, ಸೋಮವಾರ ವಿಚಾರಣೆ ಕೈಗೆತ್ತಿಕೊಂಡಿದ್ದು, ವೀಡಿಯೋದಲ್ಲಿ ಮಗುವನ್ನು ತೋರಿಸದೇ ಮತ್ತು ಸೂಕ್ತ ಮಾಹಿತಿ ನೀಡದ ಕಾರಣ ಮಗುವನ್ನು ತಾಯಿ ಸುಪರ್ದಿಗೆ ವಹಿಸಿ ಆದೇಶಿಸಿತು.

ಹೆಚ್ಚಿನ ಮಾಹಿತಿ ನೀಡಲು ಕಾಲವಕಾಶ ನೀಡಬೇಕು ಎಂದು ಅತುಲ್ ತಾಯಿ ಮಾಡಿದ ಮನವಿಯನ್ನು ನ್ಯಾಯಮೂರ್ತಿ ನಾಗರತ್ನ ತಿರಸ್ಕರಿಸಿದ್ದು, ಮಗು ಹುಟ್ಟಿಸು, ಮುಂದೆ ಕೋರ್ಟ್ ನೋಡಿಕೊಳ್ಳುತ್ತದೆ ಎಂಬ ಭಾವನೆ ಅರ್ಜಿದಾರರಲ್ಲಿ ಕಾಣುತ್ತದೆ.

45 ನಿಮಿಷಗಳ ಬಿಡುವಿನ ನಂತರ ಮಗು ಇರುವ ವೀಡಿಯೋ ಲಿಂಕ್ ಕಳಿಸಲು ಸೂಚಿಸಲಾಗಿತ್ತು. ಆದರೆ ಆ ವೇಳೆ ಕೋರ್ಟ್ ನಲ್ಲಿ ನೆಟ್ ವರ್ಕ್ ಸಮಸ್ಯೆ ಉಂಟಾಗಿತ್ತು. ಈ ವೇಳೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆ ಮಗು ಹಾಗೂ ತಾಯಿ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿತು.

ನಾವು ಮಗುವಿನ ಹಿತದೃಷ್ಟಿಯಿಂದ ತೀರ್ಪು ನೀಡಬೇಕಿದೆ ಎಂದು ಹೇಳಿದಾಗ, ಮಗು ಫರಿದಾಬಾದ್ ವಸತಿ ಶಾಲೆಗೆ ಹಾಕಲಾಗಿದೆ. ಆದರೆ ಅಲ್ಲಿಂದ ಶಾಲೆ ಮಧ್ಯದಲ್ಲಿ ಕರೆತರುವುದು ಕಷ್ಟ ಎಂದಾಗ ಮುಂದಿನ ವಿಚಾರಣೆ ವೇಳೆ ಎಲ್ಲರೂ ನ್ಯಾಯಾಲಯದಲ್ಲಿ ಹಾಜರು ಇರಬೇಕು. ಅಲ್ಲದೇ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments