Wednesday, July 3, 2024
Google search engine
Homeಬೆಂಗಳೂರುನೀರು ನಿರ್ವಹಣೆಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ: ಮೊದಲ ಸ್ಥಾನ ಯಾರಿಗೆ ಗೊತ್ತಾ?

ನೀರು ನಿರ್ವಹಣೆಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ: ಮೊದಲ ಸ್ಥಾನ ಯಾರಿಗೆ ಗೊತ್ತಾ?

ನೀರಿನ ಸಮಸ್ಯೆಯಿಂದ ತತ್ತರಿಸಿರುವ ನಡುವೆಯೇ ಬಳಸಿದ ನೀರು ನಿರ್ವಹಣೆಯಲ್ಲಿ ಬೆಂಗಳೂರು ದೇಶದಲ್ಲೇ 2ನೇ ಸ್ಥಾನ ಪಡೆದಿದೆ.

ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ, ವಾಟರ್ ಆ್ಯಂಡ್ ಎನ್ವಿರಾನ್‌ಮೆಂಟ್‌ ನಡೆಸಿದ ಸರ್ವೇ ಪ್ರಕಾರ ಬಳಸಿದ ನೀರು ನಿರ್ವಹಣೆಯಲ್ಲಿ ಗುಜರಾತ್ ನ ಸೂರತ್‌ ಮೊದಲ ಸ್ಥಾನ ಪಡೆದಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ.

ದೇಶದ 10 ರಾಜ್ಯಗಳ ಪೈಕಿ 500 ನಗರಗಳಲ್ಲಿ ನೀರು ನಿರ್ವಹಣೆ ಕುರಿತು ಸರ್ವೇ ಮಾಡಲಾಗಿದ್ದು, ಸೂರತ್‌ 3.32 ಅಂಕಗಳನ್ನು ಪಡೆದು ಮೊದಲ ಸ್ಥಾನ ಗಳಿಸಿದರೆ, ಬೆಂಗಳೂರು 5 ಅಂಕಗಳಿಗೆ 3.23 ಅಂಕ ಪಡೆದು 2ನೇ ಸ್ಥಾನದಲ್ಲಿದೆ.

ಸೂರತ್ ಮತ್ತು ಬೆಂಗಳೂರು ಹೊರತುಪಡಿಸಿದರೆ ಉಳಿದ ಯಾವ ನಗರಗಳೂ 3 ಅಂಕ ಗಳಿಸಿಲ್ಲ. ಸಂಸ್ಕರಿಸಿದ ಗೃಹ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಂಸ್ಕರಿಸಿದ ಬಳಸಿದ ನೀರಿನ ನೀತಿಯನ್ನು ಅಳವಡಿಸಿಕೊಂಡಿರುವ 10 ರಾಜ್ಯಗಳಲ್ಲಿ ಬಳಸಿದ ನೀರಿನ ನಿರ್ವಹಣೆ ಎಂಬ ವಿಷಯದ ಕುರಿತು ಅಧ್ಯಯನ ನಡೆಸಲಾಗಿತ್ತು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2021 ರಲ್ಲಿ ಪ್ರಕಟಿಸಿದ ಇತ್ತೀಚಿನ ರಾಷ್ಟ್ರೀಯ ಮಟ್ಟದ ಒಳಚರಂಡಿ ದಾಸ್ತಾನು ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ (ತೋಟಗಾರಿಕೆ ಮತ್ತು ಕೈಗಾರಿಕೆಗಳಿಗೆ) ಸಂಸ್ಕರಿಸಿದ ನೀರು ಬಳಸಬಹುದಾಗಿದೆ. ಬೆಂಗಳೂರು ಜಲಮಂಡಳಿಯೂ ನೀರಿನ ಮರುಬಳಕೆಯನ್ನು ಉಲ್ಲೇಖಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments