ಬೆಂಗಳೂರಿನ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಚಿಂತನೆ ನಡೆಸಿದ್ದು, ಸಾರ್ವಜನಿಕರ ಅಭಿಪ್ರಾಯ ಕೇಳಿದೆ.
ಬೆಂಗಳೂರಿನಲ್ಲಿ 2011ರಲ್ಲಿ ಆರಂಭವಾದ ನಮ್ಮ ಮೆಟ್ರೋ ರೈಲು ಪ್ರಯಾಣ ದರವನ್ನು ಒಂದು ಬಾರಿ ಮಾತ್ರ ಏರಿಕೆ ಮಾಡಲಾಗಿದ್ದು, ಇದೀಗ ಶೇ.15ರಿಂದ ಶೇ.20ರಷ್ಟು ಟಿಕೆಟ್ ದರ ಏರಿಕೆಗೆ ಮುಂದಾಗಿದೆ.
ಪ್ರಸ್ತುತ ಮೆಟ್ರೋ ರೈಲು ದರ ಕನಿಷ್ಠ 10 ರೂ. ಮತ್ತು ಗರಿಷ್ಠ 60 ರೂ. ನಿಗದಿಪಡಿಸಲಾಗಿದೆ. ಇದೀಗ ಶೇ.15ರಿಂದ 20ರಷ್ಟು ಏರಿಕೆ ಮಾಡಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆ ಕುರಿತು ಅಕ್ಟೋಬರ್ 21ರೊಳಗೆ ಸಾರ್ವಜನಿಕರು ಅಭಿಪ್ರಾಯ ನೀಡಬಹುದಾಗಿದೆ. 2011ರಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿದ್ದು, 2017ರಲ್ಲಿ ಒಂದು ಬಾರಿ ಮಾತ್ರ ದರ ಹೆಚ್ಚಳ ಮಾಡಲಾಗಿತ್ತು.