ಜಿಯೋ ರಿಲಾಯನ್ಸ್ ಮೊಬೈಲ್ ಸೇವೆಯಲ್ಲಿ ಏರಿಕೆ ಮಾಡುತ್ತಿದ್ದಂತೆ ಭಾರ್ತಿ ಏರ್ ಟೆಲ್ ಕಂಪನಿ ಕೂಡ ಪ್ರೀಪೇಯ್ಡ್ ಮತ್ತ ಪೋಸ್ಟ್ ಪೇಯ್ಡ್ ಸೇವೆಗಳ ದರದಲ್ಲಿ ಶೇ.20ರಷ್ಟು ಏರಿಕೆ ಮಾಡಿದೆ.
ಏರ್ ಟೆಲ್ ಸಂಸ್ಥೆ ನೂತನ ದರವನ್ನು ಮುಂದಿನ ವಾರ ಅಂದರೆ ಜುಲೈ 3ರಿಂದ ಜಾರಿಗೆ ತರುವುದಾಗಿ ಹೇಳಿಕೊಂಡಿದೆ. ಇದರಿಂದ ಗ್ರಾಹಕರಿಗೆ ಮೊಬೈಲ್ ಸೇವೆ ದುಬಾರಿ ಆಗಲಿದೆ.
399 ರೂ. ಯೋಜನೆಯಲ್ಲಿ ಗ್ರಾಹಕರು 40 ಜಿಬಿ ಡಾಟಾ ಪಡೆಯಲಿದ್ದರೆ, 499 ರೂ. ಯೋಜನೆಯಲ್ಲಿ ಮಾಸಿಕ 75 ಜಿಡಿ ಡಾಟಾ ಮತ್ತು 549 ರೂ. ಯೋಜನೆಯಲ್ಲಿ ಡಿಸ್ನಿ, ಹಾಟ್ ಸ್ಪಾಟ್ ಮುಂತಾದ ಸೇವೆಗಳನ್ನು ಪಡೆಯಬಹುದಾಗಿದೆ.
ವಾರ್ಷಿಕ 1799 ರೂ. ಹಾಗೂ 2999 ರೂ. ಶುಲ್ಕದ ಯೋಜನೆಗಳಲ್ಲಿ ಕನಿಷ್ಠ 200ರಿಂದ 600 ರೂ. ಏರಿಕೆಯಾಗಲಿದೆ. ಉಳಿದಂತೆ 100 ಎಸ್ ಎಂಎಸ್ ಮತ್ತು ಅನಿಯಮಿತ ಕರೆಗಳ ಪ್ರೀಪೇಯ್ಡ್ ಪರಿಷ್ಕೃತ ದರಗಳ ವಿವರ ಹೀಗಿದೆ.