ಹಿಂದೂಗಳಿಗೆ ಶಾಸ್ತ್ರ ಮತ್ತು ಶಸ್ತ್ರಾಸ್ತ್ರದ ಅಗತ್ಯವಿದೆ ಎಂದು ಪ್ರತಿಪಾಸಿರುವ ಬಿಜೆಪಿ ಶಾಸಕ ನವರಾತ್ರಿ ಉತ್ಸವದ ಅಂಗವಾಗಿ ನಡೆದ ದುರ್ಗಾ ಪೂಜೆ ಆಯೋಜಕರಿಗೆ ಖಡ್ಗಗಳನ್ನು ವಿತರಿಸಿದ್ದಾರೆ. ಈ ಫೋಟೊ ಹಾಗೂ ವೀಡೀಯೋಗಳು ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಶಾಸಕ ಮಿಥಲೇಶ್ ಕುಮಾರ್ ಬಿಹಾರದ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಪೆಂಡಾಲ್ ಹಾಕಿ ದುರ್ಗಾ ಪೂಜೆ ನಡೆಸುವವರಿಗೆ ಕಾರಿನಲ್ಲಿ ಖಡ್ಗಗಳನ್ನು ಇರಿಸಿಕೊಂಡು ಎಲ್ಲರಿಗೂ ವಿತರಿಸುತ್ತಾ ಬಂದಿದ್ದಾರೆ. ಖಡ್ಗದ ಜೊತೆ ರಾಮಾಯಣ ಪುಸ್ತಕವನ್ನು ನೀಡಿದ್ದಾರೆ.
ಮಿಥಲೇಶ್ ಕುಮಾರ್ ಖಡ್ಗಗಳನ್ನು ವಿತರಿಸುತ್ತಿರುವ ಬಗ್ಗೆ ಸ್ಥಳೀಯ ಆರ್ ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ಸೀತಾದೇವಿಯ ದೇವಸ್ಥಾನ ಇರುವ ಪುನೌರಾ ಧಾಮ್ ನಿಂದ ಖಡ್ಗ ಮತ್ತು ರಾಮಾಯಣ ಪುಸ್ತಕ ವಿತರಣೆ ಆರಂಭಿಸಿದ್ದು, 72 ಪೆಂಡಾಲ್ ಗಳ ಪೈಕಿ 35 ಕಡೆ ಖಡ್ಗಗಳನ್ನು ಶಾಸಕ ತಮ್ಮ ವಿಧಾನಸಭೆಯಲ್ಲಿ ವಿತರಿಸಿದ್ದಾರೆ.
ಶಾಸಕರ ವರ್ತನೆಯನ್ನು ಬಿಜೆಪಿ ಸಚಿವ ಗಿರಿರಾಜ್ ಸಿಂಗ್ ಸಮರ್ಥಿಸಿಕೊಂಡಿದ್ದು, ಶತ್ರುಗಳನ್ನು ನಾಶ ಮಾಡಲು ಖಡ್ಗ ಹಾಗೂ ಸಂಸ್ಕಾರ ಮತ್ತು ಸಂಸ್ಕೃತಿ ಅರಿಯಲು ರಾಮಾಯಣ ಪುಸ್ತಕ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.