ಆಕಸ್ಮಿಕ ಹಾರಿದ ಗುಂಡು ಕಾಲಿಗೆ ಬಡಿದಿದ್ದರಿಂದ ಬಾಲಿವುಡ್ ನಟ ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಮುಂಬೈನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
60 ವರ್ಷದ ಗೋವಿಂದ ಅವರ ಲೈಸೆನ್ಸ್ ಹೊಂದಿರುವ ವೈಯಕ್ತಿಕ ಗನ್ ಆಕಸ್ಮಿಕವಾಗಿ ಸಿಡಿದಿದ್ದರಿಂದ ಕಾಲಿಗೆ ಗಾಯವಾಗಿದೆ.
ಮುಂಬೈನಿಂದ ಕೋಲ್ಕತಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ. ಈ ವೇಳೆ ಶಿವಸೇನೆಯ ಮುಖಂಡರೊಬ್ಬರು ಮಾತ್ರ ಜೊತೆಯಲ್ಲಿದ್ದರು ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾದ ನಂತರ ಆಟೋ ವೀಡಿಯೋ ಬಿಡುಗಡೆ ಮಾಡಿರುವ ಗೋವಿಂದ, ಎಲ್ಲರ ಹಾರೈಕೆ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ.