ಆಡಿಯೋ ತಂತ್ರಜ್ಞಾನದ ಪ್ರವರ್ತಕರಾಗಿರುವ, ಭಾರತದ ನಂಬರ್ 1 ಆಡಿಯೋ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಹೊಂದಿರುವ ಬೋಲ್ಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುನ್ನತ ವಿನ್ಯಾಸ ಹೊಂದಿರುವ ಟಿಡಬ್ಲ್ಯೂಎಸ್ ಕ್ಲಾರಿಟಿ 1 ಮತ್ತು ಕ್ಲಾರಿಟಿ 3 ಎಂಬ ಎರಡು ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. ಐಷಾರಾಮಿತನ, ಕಾರ್ಯನಿರ್ವಹಣೆ ಮತ್ತು ವಿನ್ಯಾಸದ ಅತ್ಯಪೂರ್ವ ಸಂಯೋಜನೆಯನ್ನು ಹೊಂದಿರುವ ಈ ಕ್ಲಾರಿಟಿ ಸರಣಿಯು ಆಡಿಯೋ ಶ್ರೇಷ್ಠತೆಯಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲಿದೆ.
ಹೊಸ ಕ್ಲಾರಿಟಿ ಸರಣಿಯ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಅತ್ಯಾಧುನಿಕ ಫೀಚರ್ ಗಳೊಂದಿಗೆ ವಿಶಿಷ್ಟ ಆಡಿಯೋ ಅನುಭವ ಒದಗಿಸಲೆಂದೇ ಸಿದ್ಧಪಡಿಸಲಾಗಿದೆ. 50 ಡಿಬಿವರೆಗಿನ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್, ಸ್ಫಟಿಕ-ಸ್ಪಷ್ಟ ಕಾಲ್ ಸೌಲಭ್ಯ ಒದಗಿಸುವ 6 ಅತ್ಯಾಧುನಿಕ ಮೈಕ್ರೊಫೋನ್‌ಗಳು ಮತ್ತು ಬೋಲ್ಟ್ ಎಎಂಪಿ ಆಪ್ ಮೂಲಕ ಸುಲಭವಾಗಿ ನಿರ್ವಹಣೆಯಂತ ಸೌಕರ್ಯಗಳನ್ನು ಒದಗಿಸಿ ಅಪೂರ್ವ ಅನುಕೂಲತೆ ಒದಗಿಸುತ್ತದೆ. ಡ್ಯುಯಲ್ ಡಿವೈಸ್ ಪೇರಿಂಗ್ (ಎರಡು ಡಿವೈಸ್ ಗಳಿಗೆ ಕನೆಕ್ಟ್ ಮಾಡಬಹುದು) ಮತ್ತು ಬ್ಲೂಟೂತ್ 5.4 ಸೌಲಭ್ಯದಿಂದ ವೇಗವಾಗಿ ಕನೆಕ್ಟ್ ಆಗುತ್ತದೆ. ಸ್ಪೇಷಿಯಲ್ ಆಡಿಯೋ ಸೌಲಭ್ಯ ಉತ್ತಮ ಸೌಂಡ್ ಅನ್ನು ಒದಗಿಸುತ್ತದೆ. ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್ ಬಣ್ಣಗಳಲ್ಲಿ ಪ್ರೀಮಿಯಂ ಗುಣಮಟ್ಟದ ಫಿನಿಶ್ ಜೊತೆಗೆ ಲಭ್ಯವಿದೆ.
ಈ ಟಿಡಬ್ಲ್ಯೂಎಸ್
ನಿಮಗೆ 50 ಗಂಟೆಗಳವರೆಗಿನ ಪ್ಲೇ ಟೈಮ್ ನೀಡುತ್ತದೆ ಮತ್ತು ಲೈಟ್ನಿಂಗ್ ಬೌಲ್ಟ್™ ತಂತ್ರಜ್ಞಾನದಿಂದ ನೀವು ಇದನ್ನು ಮಿಂಚಿನ ವೇಗದಲ್ಲಿ ಚಾರ್ಜಿಂಗ್ ಮಾಡಬಹುದಾಗಿದೆ. ಬಾಸ್ ಹೆಚ್ಚಳಕ್ಕೆ 13 ಎಂಎಂ ಡ್ರೈವರ್ ಇರುವುದರಿಂದ, ಗೇಮಿಂಗ್ ಅನುಭವ ಹೆಚ್ಚು ಮಾಡುವ ಎಸ್‌ಬಿಸಿ ಎಎಸಿ ಕೋಡೆಕ್ ಕಂಪಾಟಿಬಿಲಿಟಿ ಸೌಲಭ್ಯದಿಂದ ಮತ್ತು ಕಾಂಬ್ಯಾಟ್™ ಗೇಮಿಂಗ್ ಮೋಡ್‌ನಲ್ಲಿ ಅಲ್ಟ್ರಾ ಲೋ 45ಎಮ್‌ಎಸ್ ಲೇಟೆನ್ಸಿ ಹೊಂದಬಹುದಾದ್ದರಿಂದ ಈ ಸಾಧನಗಳು ಗೇಮರ್ ಗಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಐಪಿಎಕ್ಸ್5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಇದೆ. ಈ ಉತ್ಪನ್ನವನ್ನು ಭಾರತದಲ್ಲಿ ರಚಿಸಲಾಗಿದ್ದು, ಆಡಿಯೊ ತಂತ್ರಜ್ಞಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಎಂಬ ಹೆಸರನ್ನು ಬೋಲ್ಟ್ ಮತ್ತಷ್ಟು ಗಟ್ಟಿಗೊಳಿಸಿದೆ.
ಈ ಕುರಿತು ಮಾತನಾಡಿದ ಬೋಲ್ಟ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ವರುಣ್ ಗುಪ್ತಾ, “ಬೋಲ್ಟ್ ನಲ್ಲಿ ನಾವು ಉತೃಷ್ಟ ಉತ್ಪನ್ನಗಳನ್ನು ನೀಡಿ ಆಡಿಯೋ ತಂತ್ರಜ್ಞಾನ ಕ್ಷೇತ್ರವನ್ನು ಬದಲಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆಯ ಕ್ಲಾರಿಟಿ ಸರಣಿಯನ್ನು ಬಿಡುಗಡೆ ಮಾಡುವುದರ ಮೂಲಕ ವಿಶಿಷ್ಟ ಆಡಿಯೋ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ. ಸಂಗೀತ ಪ್ರಿಯರಿಗೆ ಮತ್ತು ಗೇಮರ್ ಗಳಿಗೆ ಬೇಕಾದಂತೆ ಈ ಉತ್ಪನ್ನವನ್ನು ವಿನ್ಯಾಸ ಮಾಡಿದ್ದು, ಕ್ಲಾರಿಟಿ ಸರಣಿ ಅವರ ಆಡಿಯೋ ಅನುಭವ ಹೆಚ್ಚಿಸಲಿದೆ ಎಂಬ ವಿಶ್ವಾಸ ನಮಗಿದೆ. ಗ್ರಾಹಕರಿಗೆ ಅದ್ಭುತ ಅನುಭವಗಳನ್ನು ಒದಗಿಸುವುದು ಬೋಲ್ಟ್ ನ ಧ್ಯೇಯವಾಗಿದೆ. ಕ್ಲಾರಿಟಿ ಸರಣಿಯು ಈ ಕ್ಷೇತ್ರದಲ್ಲಿ ನಾವು ಹೊಂದಿರುವ ಆಳವಾದ ತಿಳುವಳಿಕೆಗೆ ಪುರಾವೆಯಾಗಿದೆ” ಎಂದು ಹೇಳಿದರು.
ಕ್ಲಾರಿಟಿ 1 ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು ಮರಳು ಗಡಿಯಾರದಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು ಹೊಂದಿದೆ. ಇದು ತುಂಬಾ ಹಗುರವಾಗಿದ್ದು, ಸೂಕ್ತವಾಗಿ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ ಮತ್ತು ಎರಡೂ ಕಡೆಗಳಲ್ಲಿ ಸಮತೋಲಿತ ತೂಕವನ್ನು ಹೊಂದಿದ್ದು, ಆರಾಮದಾಯಕವಾಗಿ ಬಳಸಬಹುದಾಗಿದೆ. ಪ್ರೊಕ್ರೇನಿಯಮ್ ಮೆಟಲ್ ಬಾಡಿ ಹೊಂದಿದೆ ಮತ್ತು ಲಿಕ್ವಿಡ್ ಮೆಟಲ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಸೊಗಸಾಗಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಉತ್ತಮ ಬಾಳಿಕೆ ಬರುತ್ತದೆ. ಕ್ಲಾರಿಟಿ 1 ನಿಮಗೆ ಸೂಕ್ತವಾದ ವಾಯ್ಸ್ ಅಸಿಸ್ಟೆಂಟ್ ಜೊತೆ ಸುಲಭವಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ವಾಯ್ಸ್ ಕಮಾಂಡ್ ಗಳ ಮೂಲಕ ನೀವು ಸಂಗೀತವನ್ನು ನಿಮಗಿಷ್ಟ ಬಂದಂತೆ ಕೇಳಬಹುದು ಮತ್ತು ಸೂಚನೆಗಳನ್ನು ತಿಳಿಯಬಹುದು.
ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ ಸೌಲಭ್ಯ ಇರುವುದರಿಂದ ನೀವು ಏಕಕಾಲದಲ್ಲಿ ಎರಡು ಸಾಧನಗಳಿಗೆ ಈ ಉತ್ಪನ್ನಗಳನ್ನು ಕನೆಕ್ಟ್ ಮಾಡಬಹುದು. 80-ಗಂಟೆಗಳ ಬ್ಯಾಟರಿ ಬಾಳಿಕೆ ಬರಲಿದ್ದು, ಪದೇ ಪದೇ ಚಾರ್ಜ್ ಮಾಡುವ ಅಗತ್ಯ ಬೀಳುವುದಿಲ್ಲ. ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುವುದರಿಂದ ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 180 ನಿಮಿಷಗಳ ಪ್ಲೇ ಟೈಮ್ ಸಿಗುತ್ತದೆ. ಬೋಲ್ಟ್ ನ ವಿಶಿಷ್ಟವಾದ ಕ್ಲಾರಿಟಿ ಸಿಗ್ನೇಚರ್ ಸೌಂಡ್ ಮತ್ತು ಶಕ್ತಿಯುತ 13ಎಂಎಂ ಡ್ರೈವರ್‌ಗಳು ಸ್ಫಟಿಕ-ಸ್ಪಷ್ಟ ಆಡಿಯೋ ಮತ್ತು ಅತ್ಯುತ್ತಮ ಬಾಸ್ ಅನ್ನು ಒದಗಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ 40ಎಂಎಸ್ ಅಲ್ಟ್ರಾ-ಲೋ ಲೇಟೆನ್ಸಿಯಿಂದಾಗಿ ಕ್ಲಾರಿಟಿ 1 ಉತ್ಪನ್ನವು ಗೇಮರ್ ಗಳಿಗೆ ಲ್ಯಾಗ್ ಫ್ರೀ ಮತ್ತು ತೀವ್ರವಾದ ಗೇಮಿಂಗ್ ಅನುಭವ ಒದಗಿಸುತ್ತದೆ.
ಲಭ್ಯತೆ: