ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ಸ್ಟಾಕ್ ಎಕ್ಸ್ ಚೇಂಜ್ (ಷೇರು ಮಾರುಕಟ್ಟೆ) ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.
ಕರಾಚಿಯ ಷೇರು ಮಾರುಕಟ್ಟೆಯ 4ನೇ ಮಹಡಿಯಲ್ಲಿ ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಹೂಡಿಕೆದಾರರು ಹಾಗೂ ಸಿಬ್ಬಂದಿಯನ್ನು ಕಟ್ಟಡದಿಂದ ಹೊರಗೆ ಕಳುಹಿಸುವ ಮೂಲಕ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.
ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಮೊದಲ ಬಾರಿ ಬೆಂಕಿ ಕಾಣಿಸಿಕೊಂಡು ನಂತರ ಅದು ಇತರೆ ಅಂತಸ್ತುಗಳಿಗೆ ವಿಸ್ತರಣೆ ಆಗಿದೆ. ಆದರೆ ಕಟ್ಟಡದಲ್ಲಿ ಕೂಲಿಂಗ್ ವ್ಯವಸ್ಥೆ ಇರುವುದರಿಂದ ಬೆಂಕಿ ಪ್ರಮಾಣ ಕಡಿಮೆ ಇದ್ದು, ವ್ಯಾಪಕವಾಗಿ ಹಬ್ಬಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದಲ್ಲಿ 1122 ಹೂಡಿಕೆದಾರರು ಇದ್ದರು. ಅವರನ್ನು ರಕ್ಷಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರೆ.