Thursday, November 21, 2024
Google search engine
Homeಅಪರಾಧಕೈಗೆ ದಾರ ಕಟ್ಟಿಕೊಂಡು ಅಣ್ಣ-ತಂಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

ಕೈಗೆ ದಾರ ಕಟ್ಟಿಕೊಂಡು ಅಣ್ಣ-ತಂಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

ತಾಯಿಯ ಸಾವಿನ ದುಃಖ ತಾಳಲಾರದೇ ಅಣ್ಣ ಮತ್ತು ತಂಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಶಿಡ್ಲಘಟ್ಟ ನಗರದ ಶೆಟ್ಟಪ್ಪನ ತೋಪಿನ ಬಳಿಯ ರೈಲ್ವೇ ಹಳಿ ಮೇಲೆ ಪ್ರೇಮ ನಗರದ ನಿವಾಸಿ ಅಣ್ಣ ಪ್ರಭು ಮತ್ತು ತಂಗಿ ನವ್ಯ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಭು ಮತ್ತು ನವ್ಯ ಒಬ್ಬರ ಕೈಗೆ ಮತ್ತೊಬ್ಬರು ಸೇರಿ ದಾರ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ.

ಇತ್ತೀಚೆಗೆ ತಾಯಿ ಸಾವಿನಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಅಣ್ಣ-ತಂಗಿ ದುಃಖ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments