ಉತ್ತರಾಖಂಡ್ ನಲ್ಲಿ ಸತತವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಹರಿದ್ವಾರದಲ್ಲಿ ಹರ್ ಕಿ ಪುರ ನದಿ ತುಂಬಿ ಹರಿದಿದ್ದರಿಂದ ಕಾರುಗಳು ಮತ್ತು ಬಸ್ ಗಳು ಕೊಚ್ಚಿ ಹೋಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹರಿದ್ವಾರ ಸೇರಿದಂತೆ ಯಾತ್ರಾ ಕ್ಷೇತ್ರಗಳಲ್ಲಿ ಏಕಾಏಕಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾತ್ರಿಗಳು ನದಿಗಳಿಗೆ ಈ ಸಮಯದಲ್ಲಿ ಇಳಿಯಬಾರದು ಎಂಬ ಎಚ್ಚರಿಕೆ ಸಂದೇಶವನ್ನು ಈ ವೀಡಿಯೊಗಳು ನೀಡುತ್ತಿವೆ.
ಉತ್ತರಾಖಂಡ್ ನಲ್ಲಿ ಸಾಮಾನ್ಯವಾಗಿ ಮುಂಗಾರು ವೇಳೆ ಬಹುತೇಕ ಸಮಯದಲ್ಲಿ ಏಕಾಏಕಿ ನದಿಯಲ್ಲಿ ಏರಿಕೆ ಆಗುತ್ತದೆ. ದಿಢೀರನೆ ಸೃಷ್ಟಿಯಾಗುವ ಪ್ರವಾಹದಿಂದ ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.