ಪ್ರಧಾನಿಯಾಗಿ ಮೂರನೇ ಬಾರಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ಮೂರು ವಾರಗಳ ನಂತರ ಸಂಪುಟ ಸಮಿತಿಗಳಿಗೆ ನೇಮಕ ಮಾಡಿದ್ದು, ಬಹುತೇಕ ಪ್ರಮುಖ ಸಮಿತಿಗಳನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಮೈತ್ರಿಪಕ್ಷಗಳನ್ನು ಕಡೆಗಣಿಸಿದೆ.
ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲರಾಗಿದ್ದರೂ ಮೈತ್ರಿಪಕ್ಷಗಳ ಸಹಾಯದಿಂದ ಮೂರನೇ ಬಾರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಬಿಜೆಪಿ ಸಂಪುಟ ಸಮಿತಿಗಳ ನೇಮಕದ ವೇಳೆ ಮೈತ್ರಿಪಕ್ಷಗಳನ್ನು ಕಡೆಗಣಿಸಿ ಬಹುತೇಕ ಸಮಿತಿಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಜೂನ್ 9ರಂದು ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಮೂರು ವಾರಗಳ ನಂತರ ಸಂಪುಟ ಸಮಿತಿಗಳನ್ನು ನೇಮಕ ಮಾಡಿದ್ದು, ಬಹುತೇಕ ಸಮಿತಿಗಳಿಗೆ ಈ ಹಿಂದೆ ನೇಮಕ ಮಾಡಿದವರನ್ನೇ ಮುಂದುವರಿಸಲಾಗಿದೆ. ಅದರಲ್ಲೂ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಮಿತಿಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಪ್ರಧಾನಿ ಮೋದಿ ನೇತೃತ್ವದ ರಕ್ಷಣಾ ವೆಚ್ಚ ಮತ್ತು ಹಿರಿಯ ಅಧಿಕಾರಿಗಳ ನೇಮಕಾತಿ ಸಮಿತಿಗಳಲ್ಲಿ ರಕ್ಷಣಾ ಸಚಿವ, ವಿತ್ತ ಸಚಿವೆ, ಗೃಹ ಸಚಿವರು ಸಮಿತಿ ಸದಸ್ಯರಾಗಿದ್ದು, ಮೈತ್ರಿಪಕ್ಷದ ಸಚಿವರಿಗೆ ಅವಕಾಶ ನೀಡಲಾಗಿಲ್ಲ.
ಸೂಪರ್ ಕ್ಯಾಬಿನೆಟ್ ಎಂದೇ ಕರೆಯಲಾಗುವ ದೇಶದ ಆರ್ಥಿಕತೆ ಮತ್ತು ರಾಜಕೀಯ ವಿಷಯಗಳ ಮೇಲೆ ಗಮನ ಹರಿಸುವುದು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಂಬಂಧ ಸುಧಾರಿಸುವ ರಾಜಕೀಯ ವ್ಯವಹಾರ ಸಮಿತಿಯಲ್ಲಿ ತೆಲುಗುದೇಶಂನ ಕೆ.ರಾಮಮೋಹನ್ ನಾಯ್ಡು ಹಾಗೂ ಹಿಂದೂಸ್ತಾನ್ ಆವಾಂ ಮೋರ್ಚಾದ ಮುಖ್ಯಸ್ಥ ಜಿತಿನ್ ರಾಮ್ ಮಹಜಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಜನತಾದಳ ಯುನೈಟೆಡ್ ನ ಲಲನ್ ಸಿಂಗ್ ಆರ್ಥಿಕ ವ್ಯವಹಾರಗಳ ಸಮಿತಿಗೆ, ಲೋಕಜನಶಕ್ತಿಯ ಚಿರಾಗ್ ಪಾಸ್ವಾನ್ ಅವರನ್ನು ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ಸಮಿತಿ ಮತ್ತು ಆಹಾರ ಸಂಸ್ಕೃರಣೆ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಲಲನ್ ಸಿಂಗ್ ಅಲಿಯಾಸ್ ರಂಜನ್ ಸಿಂಗ್ ಪಂಚಾಯತ್ ರಾಜ್ ಮತ್ತು ಹೈನುಗಾರಿಕೆ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ. ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಅವರಿಗೆ ಕೌಶಲ್ಯ, ಉದ್ಯೋಗ ಮತ್ತು ಜೀವನ ಸಮಿತಿಗೆ ಸದಸ್ಯರಾಗಿದ್ದಾರೆ.
ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೇಂದ್ರ ಕೃಷಿ ಸಚಿವರಾಗಿದ್ದು, ಆರ್ಥಿಕ ವ್ಯವಹಾರ, ಅನುಪಮ ದೇವಿಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.