2023ರಲ್ಲಿ ಅತೀ ಹೆಚ್ಚು 100 ರೆಡ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ 10ನೇ ಗುಪ್ತಚರ ಇಲಾಖೆಯ ಸಂಪರ್ಕ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಕ್ರಿಮಿನಲ್ ಗಳು ಅಥವಾ ಅಪರಾಧಿಗಳಿಗೆ ದೇಶದ ಗಡಿ ಇಲ್ಲವಾಗಿದೆ. ಸುಲಭವಾಗಿ ವಿದೇಶಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದಾರೆ. ಇದರಿಂದ ಸಿಬಿಐ ಜಾಗತಿಕ ಮಟ್ಟದ ಸವಸಲುಗಳು ಹೆಚ್ಚಾಗಿವೆ ಎಂದು ಅವರು ಆತಂಕ ವ್ಯಕಪಡಿಸಿದರು.
2023ರಲ್ಲೇ 100 ರೆಡ್ ನೋಟಿಸ್ ಜಾರಿ ಮಾಡಲಾಗಿದೆ. ಇದು ಇತಿಹಾಸದಲ್ಲೇ ಗರಿಷ್ಠ ನೋಟಿಸ್ ಜಾರಿ ಮಾಡಿದ ವರ್ಷವಾಗಿದೆ ಎಂದರು.
2023ರಲ್ಲಿ 29 ಕ್ರಿಮಿನಲ್ ಗಳನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ. 2024ರಲ್ಲಿ 19 ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳನ್ನು ವಾಪಸ್ ಕರೆತರಲಾಗಿದೆ ಎಂದು ಪ್ರವೀಣ್ ಸೂದ್ ವಿವರಿಸಿದರು.
ಪ್ರಸ್ತುತ ಭಾರತ ಅಂತಾರಾಷ್ಡ್ರೀಯ ಮಟ್ಟದಲ್ಲಿ ಅಪರಾಧ ಪ್ರಕರಣಗಳ ಒತ್ತಡ ಎದುರಿಸುತ್ತಿದ್ದು, 2023ರಲ್ಲಿ ಭಯೋತ್ಪಾದಕ ಕೃತ್ಯ ಸೇರಿದಂತೆ 17,368 ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪ್ರವೀಣ್ ಸೂದ್ ಹೇಳಿದರು.
ಗೃಹ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಮಾತನಾಡಿ, ಸಿಬಿಐ ಒತ್ತಡದ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ 200ರಿಂದ 300 ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದೆ ಎಂದರು.