ಶೇ.3ರಷ್ಟು ಭತ್ಯೆ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಣದುಬ್ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿಗೆ ಶೇ.3ರಷ್ಟು ಭತ್ಯೆ ಹೆಚ್ಚಳಕ್ಕೆ ಸಮ್ಮತಿ ನೀಡಲಾಯಿತು.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇ.50ರಷ್ಟು ನೀಡಲಾಗುತ್ತಿದ್ದ ಭತ್ಯೆ ಶೇ.53ಕ್ಕೆ ಏರಿಕೆ ಆಗಲಿದೆ. 2024 ಜುಲೈ 1ರಿಂದ ಈ ತೀರ್ಮಾನ ಜಾರಿಗೆ ಬರಲಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನ ಮೇಲೆ ಶೇ.3ರಷ್ಟು ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ 9448.35 ಕೋಟಿ ರೂ. ಹೊರೆ ಬೀಳಲಿದೆ. ಭತ್ಯೆ ಏರಿಕೆಯಿಂದ ಪ್ರತಿವರ್ಷ 49.19 ಕೋಟಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಸೌಲಭ್ಯ ದೊರೆಯಲಿದೆ.