ದೇಶದ ಸಮಗ್ರತೆ ಮತ್ತು ಭದ್ರತೆ ದೃಷ್ಟಿಯಿಂದ ಉಗ್ರರ ನಿಗ್ರಹ ಕಾಯ್ದೆ ಅನ್ವಯ ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ (ಜೆಕೆಎನ್ಎಫ್) ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷಗಳ ಅವಧಿಗೆ ನಿಷೇಧಿಸಿದೆ.
ಹುರಿಯತ್ ಕಾನ್ಫರೆನ್ಸ್ ಜೊತೆ ಸಂಪರ್ಕ ಹೊಂದಿರು ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಜನರಲ್ಲಿ ಅಸಮಾನತೆ, ಅತೃಪ್ತಿ ಬಿತ್ತುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ.
ಕೇಂದ್ರ ಗೃಹ ಸಚಿವಾಲಯ ನಯೀಮ್ ಅಹ್ಮದ್ ನೇತೃತ್ವದ ಜೆಕೆಎನ್ ಎಫ್ ಸಂಘಟನೆಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದ್ದು, ನಿಷೇಧದ ಅವಧಿ 5 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ.