Friday, November 22, 2024
Google search engine
Homeತಾಜಾ ಸುದ್ದಿಬಾಂಗ್ಲಾದೇಶದಲ್ಲಿ ಮರುಕಳಿಸಿದ ಹಿಂಸಾಚಾರಕ್ಕೆ 18 ಮಂದಿ ಬಲಿ: ಭಾರತೀಯರಿಗೆ ಕೇಂದ್ರದಿಂದ ಎಚ್ಚರಿಕೆ

ಬಾಂಗ್ಲಾದೇಶದಲ್ಲಿ ಮರುಕಳಿಸಿದ ಹಿಂಸಾಚಾರಕ್ಕೆ 18 ಮಂದಿ ಬಲಿ: ಭಾರತೀಯರಿಗೆ ಕೇಂದ್ರದಿಂದ ಎಚ್ಚರಿಕೆ

ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ 18 ಮಂದಿ ಮೃತಪಟ್ಟಿದ್ದು, ಭಾರತೀಯರು ಹೈಅಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಸ್ವಾತಂತ್ರ್ಯ ಯೋಧರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಷಯಕ್ಕೆ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸರ್ಕಾರ ದೇಶಾದ್ಯಂತ ನಿಷೇಧಾಜ್ಞೆ ವಿಧಿಸಿದ್ದರಿಂದ ಹಿಂಸಾಚಾರ ಹತೋಟಿಗೆ ಬಂದಿತ್ತು.

ಆದರೆ ಹಿಂಸಾಚಾರ ಇದೀಗ ಮರುಕಳಿಸಿದ್ದು, ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಿವಾದ ಭುಗಿಲೆದ್ದಿದ್ದು, ಘರ್ಷಣೆಗೆ ಕಾರಣವಾಗಿದೆ. ಘರ್ಷಣೆ ಬೆನ್ನಲ್ಲೇ ಭಾರತ ಬಾಂಗ್ಲಾದೇಶದಲ್ಲಿ ತಂಗಿರುವ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ವಿದ್ಯಾರ್ಥಿಗಳ ಸಂಘರ್ಷದ ವೇಳೆ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದರು. ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಭಾರತೀಯರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments