ದೇಶಾದ್ಯಂತ ಮುಂದಿನ 100 ದಿನಗಳಲ್ಲಿ ಅಧೀನ ಕಚೇರಿ (Subordinate Offices)ಗಳಲ್ಲಿ ಇ-ಕಚೇರಿ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
2019ರಿಂದ 2014ರ ಅವಧಿಯಲ್ಲಿ ಕೇಂದ್ರದ ಅಧೀನ ಕಚೇರಿಗಳಲ್ಲಿ ತೆರೆಯಲಾಗಿದ್ದ ಇ-ಕಚೇರಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಮುಂದಿನ 100 ದಿನಗಳಲ್ಲಿ ದೇಶಾದ್ಯಂತ ಇ-ಕಚೇರಿ ತೆರೆಯಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಡತಗಳ ವಿಲೇವಾರಿಗಾಗಿ ಇ-ಕಚೇರಿ ತೆರೆಯಲು ಈಗಾಗಲೇ 133 ಸ್ಥಳಗಳನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಕಚೇರಿಗಳಲ್ಲಿನ ಅಧೀನ ಕಚೇರಿಗಳು ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ಅಂತರ್-ಸಚಿವಾಲಯದ ಸಮಾಲೋಚನೆ ಕೇಂದ್ರಗಳನ್ನು ಗುರುತಿಸಲಾಗಿದೆ.
ಜೂನ್ 24ರಿಂದ ಇ-ಕಚೇರಿ ಆರಂಭಿಸುವ ಕುರಿತು ಅಧೀನ ಕಚೇರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಇ-ಕಚೇರಿ ಅಳವಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
2019ರಿಂದ 2024ರ ಅವಧಿಯಲ್ಲಿ ಅನುಷ್ಠಾನಕ್ಕೆ ತರಲಾದ ಇ-ಕಚೇರಿಯಿಂದ ಕಡತಗಳ ವಿಲೇವಾರಿಯಲ್ಲಿ ಭಾರೀ ಪ್ರಗತಿ ಕಂಡು ಬಂದಿದ್ದು, 37 ಲಕ್ಷ ಕಡತಗಳ ಪೈಕಿ ಶೇ.94ರಷ್ಟು ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು, ಇ-ಕಚೇರಿ ಮೂಲಕ ರಸೀದಿ ನೀಡಲಾಗಿದೆ.
ಇ-ಕಚೇರಿ ಆಡಳಿತವು ಆರಂಭಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಇದರ ಸಾಧಕ-ಬಾಧಕಗಳನ್ನು ಅವಲೋಕಿಸಿದ ನಂತರ ಮತ್ತಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.