ಸಂಘ ಪರಿವಾರ (RSS) ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಗುರುತಿಸಿಕೊಳ್ಳುವುದು ಅಥವಾ ಪಾಲ್ಗೊಳ್ಳುವುದನ್ನು ನಿಷೇಧಿಸಿದ್ದ ದಶಕಗಳ ಹಿಂದಿನ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.
1966ರಲ್ಲಿ ಸರ್ಕಾರಿ ನೌಕರರು ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. 58 ವರ್ಷಗಳ ಹಿಂದಿನ ಆದೇಶವನ್ನು ಕೇಂದ್ರ ಸರ್ಕಾರದ ವೈಯಕ್ತಿಕ ಮತ್ತು ತರಬೇತಿ ಇಲಾಖೆ ರದ್ದುಗೊಳಿಸಿ ಜುಲೈ 9ರಂದು ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರು ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವ ಮೂಲಕ ಕೇಂದ್ರ ಸರ್ಕಾರ ಸರ್ದಾರ್ ವಲ್ಲಭಾಭಾಯಿ ಪಟೇಲ್ ಅವರ ಆದರ್ಶವನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ.
1948ರಲ್ಲಿ ಮಹಾತ್ಮಾ ಗಾಂಧಿ ಹತ್ಯೆ ಬೆನ್ನಲ್ಲೇ ರಾಷ್ಟ್ರಪತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಆರ್ ಎಸ್ ಎಸ್ ಅನ್ನು ನಿಷೇಧಿಸಿದ್ದರು. ಆದರೆ ಸನ್ನಡತೆ ಆಧಾರದ ಮೇಲೆ ಆರ್ ಎಸ್ ಎಸ್ ಮೇಲಿನ ನಿಷೇಧ ವಾಪಸ್ ಪಡೆಯಲಾಗಿದ್ದರೂ ಸರ್ಕಾರಿ ನೌಕರರು ಸಂಘಟನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಅಥವಾ ಗುರುತಿಸಿಕೊಳ್ಳುವುದನ್ನು ನಿಷೇಧಿಸಲಾಗಿತ್ತು.
ನಿಷೇಧ ವಾಪಸ್ ಪಡೆದ ನಂತರವೂ ಆರ್ ಎಸ್ ಎಸ್ ನಾಗ್ಪುರದ ಕಚೇರಿಯಲ್ಲಿ ಇತ್ತೀಚಿಗಿನವರೆಗೂ ತ್ರಿವರ್ಣ ಧ್ವಜವನ್ನು ಹಾರಿಸಿಲ್ಲ.
1966ರಲ್ಲಿ ಹೊಸದಾಗಿ ನಿಷೇಧ ಪ್ರಸ್ತಾಪ ಮಾಡಲಾಗಿದ್ದು, ಆದರೆ ಕೆಲವೊಂದು ನಿಯಮಗಳ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಮತ್ತು ಜಮಾತೆ-ಇ- ಇಸ್ಲಾಂ ಸಂಘಟನೆಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳದಂತೆ ಆದೇಶ ಹೊರಡಿಸಲಾಗಿತ್ತು.