Thursday, November 21, 2024
Google search engine
Homeತಾಜಾ ಸುದ್ದಿಗಗನಸಖಿ, ಭೋಜನ ವ್ಯವಸ್ಥೆಯ 132 ಆಸನ: ಬರಲಿದೆ ಕೇಂದ್ರ ಸರ್ಕಾರದ ಹೊಸ ಬಸ್!

ಗಗನಸಖಿ, ಭೋಜನ ವ್ಯವಸ್ಥೆಯ 132 ಆಸನ: ಬರಲಿದೆ ಕೇಂದ್ರ ಸರ್ಕಾರದ ಹೊಸ ಬಸ್!

ವಿಮಾನದಲ್ಲಿ ಇರುವಂತೆ ಗಗನಸಖಿಯರು, ಭೋಜನ ವ್ಯವಸ್ಥೆ, ವಿಶೇಷ ಆಸನಗಳು ಇರುವ 132 ಆಸನ ವ್ಯವಸ್ಥೆಯ ಪರಿಸರಪ್ರೇಮಿ ಅತ್ಯಾಧುನಿಕ ಬಸ್ ಗಳನ್ನು ಕೇಂದ್ರ ಸರ್ಕಾರ ರಸ್ತೆಗಿಳಿಸಲಿವೆ. ವಿಶೇಷ ಅಂದರೆ ಇಷ್ಟೆಲ್ಲಾ ಸೌಲಭ್ಯ ಇದ್ದರೂ ಸಾಮಾನ್ಯ ಬಸ್ ಪ್ರಯಾಣ ದರಕ್ಕಿಂತ ಕಡಿಮೆ ದರ ಇರುತ್ತದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಿಷಯ ತಿಳಿಸಿದ್ದು, ಪರಿಸರ ಪ್ರೇಮಿ ಬಸ್ ಗಳನ್ನು ಪ್ರಾಯೋಗಿಕವಾಗಿ ನಾಗ್ಪುರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದು ನನ್ನ ಕನಸಿನ ಯೋಜನೆಯಾಗಿದ್ದು, ಸಾಧಕ ಬಾಧಕಗಳನ್ನು ಗಮನಿಸಿ ದೇಶಾದ್ಯಂತ ಈ ಬಸ್ ಗಳನ್ನು ಬಿಡುವುದು ಎಂದು ತಿಳಿಸಿದ್ದಾರೆ.

ವಿನೂತನ ಬಸ್ ಗಳ ಸೇವೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಆಮದು ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, ಹೊಸ ವಿಧಾನದ ಇಂಧನ ಬಳಕೆಯಿಂದ ವಾಯುಮಾಲಿನ್ಯವನ್ನೂ ತಡೆಗಟ್ಟಬಹುದು ಎಂದು ಅವರು ತಿಳಿಸಿದ್ದಾರೆ.

ದೇಶ ಇಂದು ಗಾಳಿ, ನೀರು, ಶಬ್ಧ ಮಾಲಿನ್ಯದ ಸಮಸ್ಯೆಗಳನ್ನು ಪ್ರಧಾನವಾಗಿ ಎದುರಿಸುತ್ತಿದೆ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪರ್ಯಾಯ ಇಂಧನ ಬಳಕೆಯಿಂದ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.

ದೇಶದಲ್ಲಿ 300 ಎಥೆನಾಲ್ ಪಂಪ್ ಗಳನ್ನು ತೆರೆಯಲಾಗುವುದು. ಇದಕ್ಕಾಗಿ ಆಟೋ ಮೊಬೈಲ್ ಕಂಪನಿಗಳ ಜೊತೆ ಚರ್ಚಿಸಲಾಗುತ್ತಿದೆ. ಪೆಟ್ರೋಲ್ ಗೆ 120 ರೂ. ವೆಚ್ಚ ಮಾಡುವ ಬದಲು ಅರ್ಧದಷ್ಟು ಅಂದರೆ 60 ರೂ.ಗೆ ಲೀಟರ್ ಎಥೆನಾಲ್ ಮಿಶ್ರಿತ ಪೆಟ್ರೋಲ್ ದೊರೆಯಲಿದೆ. ಇದರಿಂದ ವಾಹನ ಸವಾರರಿಗೂ ಹೊರೆ ಕಡಿಮೆ ಆಗಲಿದೆ ಎಂದು ಗಡ್ಕರಿ ಹೇಳಿದರು.

ಜೆಕ್ ಗಣರಾಜ್ಯದಲ್ಲಿ ಟ್ರಾಲಿ ಬಸ್ ಗಳು ಸಂಚರಿಸುತ್ತಿದೆ. ಇದೇ ಮಾದರಿಯಲ್ಲಿ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ಅತ್ಯಾಧುನಿಕ ಬಸ್ ಗಳ ಸೇವೆ ಆರಂಭಿಸುವುದು ಸರ್ಕಾರದ ಉದ್ದೇಶವಾಗಿದೆ. ರಿಂಗ್ ರಸ್ತೆಯಲ್ಲಿ ಸುಮಾರು 49 ಕಿ.ಮೀ. ದೂರ ಸಂಚರಿಸಲಿದ್ದು, ಕೇವಲ 40 ಸೆಕೆಂಡ್‍ ಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಕಿ.ಮೀ.ಗೆ 30ರಿಂದ 40 ರೂ. ಮಾತ್ರ ವೆಚ್ಚವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments